ಕಾಸರಗೋಡು : ಆಲ್ ಕೇರಳ ಫೊಟೊಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯುನಿಟ್ ವತಿಯಿಂದ 2026-27 ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸದಸ್ಯರ ಮಕ್ಕಳಾದ ಮೌಶ್ಮಿ ಮಹೇಶ್ ಅನ್ವಿಕ ಮುರಳಿ, ಸಾನ್ವಿಕ ವಿ, ಮಾನಸ್ವಿ ಯು, ಅದ್ವಿತ್ ಡಿ.ಎ, ಆಧೀಶ್ ಎಚ್, ತೃಷನ್ ಅಚಾರ್ಯ. ಕೆ ಇವರಿಗೆ ಕಲಿಕೋಪರಣ ವಿತರಿಸಲಾಯಿತು. ಕಾರ್ಯಕ್ರಮವನ್ನು ಕಾಸರಗೋಡು ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ ಮಕ್ಕಳಿಗೆ ಬ್ಯಾಗ್ ನೀಡಿ ಉದ್ಘಾಟಿಸಿ ವಿದ್ಯಾಭ್ಯಾಸದ ಕುರಿತು ವಿಚಾರಗಳನ್ನು ಹೇಳಿದರು ಹಾಗೂ ಯೂನಿಟಿನಿಂದ ಮಾಡುವ ಈ ಕಾರ್ಯವನ್ನು ಪ್ರಶಂಸಿಸಿದರು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆ ವಹಿಸಿ ಯೂನಿಟ್ ವತಿಯಿಂದ ಇಂತಹ ಪ್ರವರ್ತನೆಯನ್ನು ಮಾಡಲು ಪದಾಧಿಕಾರಿಗಳ ಹಾಗೂ ಸದಸ್ಯರ ಬೆಂಬಲವೆಂದು ನುಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಮಹೇಶ್ ಪರಕ್ಕಿಲ, ಉದಯ ಲಾವಣ್ಯ ಸ್ಟುಡಿಯೋ, ಮುರಳಿ ಕೃಷ್ಣ ಫೋಕಲ್ ಪೋಯಿಂಟ್, ದೀಪ್ತ್ ಎಲ್ಲೋರ ಸ್ಟುಡಿಯೋ, ಸುಪ್ರಿಯಾ ಹೇಮಂತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿ ಯೂನಿಟ್ ಸಮಿತಿ ಸದಸ್ಯ ರತೀಶ್ ರಾಮು ವಂದಿಸಿದರು.

0 Comments