Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬೇಕೂರು ಸಮೀಪದ ಜೋಡುಕಲ್ಲಿ‌ನಲ್ಲಿ ವಾಹನ ತಪಾಸಣೆ ವೇಳೆ 112 ಗ್ರಾಂ ಎಂಡಿಎಂಎ ಪತ್ತೆ : ಇಬ್ಬರು ಆರೋಪಿಗಳ ಬಂಧನ


ಉಪ್ಪಳ: ಜಿಲ್ಲಾ ಪೊಲೀಸ್ ಅಧೀಕ್ಷಕರ ವಿಶೇಷ ಸ್ಕ್ವಾಡ್ ಹಾಗೂ ಮಂಜೇಶ್ವರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 112 ಗ್ರಾಂ ಎಂಡಿಎಂಎ ಸಾಗಾಟದ  ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಂದಿಯೋಡು ಸಮೀಪದ ಕುಬಣೂರು ನಿವಾಸಿ ಮೊಯ್ದಿನ್ ಕುಂಞಿ ಹಾಗೂ ಜೋಡುಕಲ್ಲಿನ ಫಾರೂಕ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಮಾದಕ ವಸ್ತು ಸಾಗಣೆಗೆ ಬಳಸಲಾಗಿದ್ದ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಪ್ತ ಮಾಹಿತಿಯ ಆಧಾರದ ಮೇಲೆ ಜಿಲ್ಲಾ ಪೊಲೀಸ್ ಸ್ಕ್ವಾಡ್ ಹಾಗೂ ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ಕೆ.ಆರ್. ಉಮೇಶ್ ನೇತೃತ್ವದ ತಂಡ ಜೋಡು ಕಲ್ಲಿನಲ್ಲಿ ವಾಹನ ತಪಾಸಣೆ ನಡೆಸಿದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಪೊಲೀಸರು ವಶಪಡಿಸಿಕೊಂಡಿರುವ ಎಂಡಿಎಂಎ ಮತ್ತು ಕಾರನ್ನು ಜಪ್ತಿ ಮಾಡಿ, ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Post a Comment

0 Comments

ಜಾಹೀರಾತು

Responsive Advertisement