ಕುಂಬಳೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕಳತ್ತೂರಿನಲ್ಲಿ ನಡೆಯುತ್ತಿರುವ 2080ನೇ ಮಧ್ಯವರ್ಜನ ಶಿಬಿರದ ಮೂರನೇ ದಿನ ಗಣ್ಯರ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬದಿಯಡ್ಕ ವಿಭಾಗದ ಸರ್ಕಲ್ ಇನ್‌ಸ್ಪೆಕ್ಟರ್ ಅನೂಪ್ ಕೃಷ್ಣನ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಮದ್ಯಪಾನದಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಮದ್ಯವ್ಯಸನವು ಮಾನವ ದೇಹದ ಮೇಲೆ ನಿಧಾನವಾಗಿ ವಿಷದಂತೆ ಪರಿಣಾಮ ಬೀರಿ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ, ವ್ಯಸನಮುಕ್ತ ಜೀವನದ ಮಹತ್ವದ ಕುರಿತು ಪರಿಣಾಮಕಾರಿ ಕೌನ್ಸೆಲಿಂಗ್ ನಡೆಸಿದರು.
ಈ ಸಂದರ್ಭದಲ್ಲಿ ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಬಲ್ಕಿಸ್ ಎಂ., ವಿಜ್ಞಾನಿ ಮುರಳೀಕೃಷ್ಣ ಕಾರಿಂಜ ಹಳೆಮನೆ, ರಾಮ ಮಾಸ್ಟರ್, ದಿನೇಶ್ ಚಿರುಗೋಳಿ, ಶಂಕರ್ ಟೈಲರ್, ಹರೀಶ್ ಶೆಟ್ಟಿ ಮಾಡ, ಬಿ.ಪಿ. ಶೇಣಿ, ಪುರುಷೋತ್ತಮ, ಚಂದ್ರರಾಜ ಶೆಟ್ಟಿ ಹಾಗೂ ಸಿವಿಲ್ ಪೊಲೀಸ್ ಅಧಿಕಾರಿಗಳಾದ ರಿಜೇಶ್ ಮತ್ತು ಶ್ರೀಜೇಶ್ ಉಪಸ್ಥಿತರಿದ್ದು, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

0 Comments