ಮುಳ್ಳೇರಿಯ : ಕೃಷಿಕನೊಬ್ಬರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬ್ಡಾಜೆ ಗ್ರಾಮದ ಗಾಡಿಗುಡ್ಡೆ ತಲೆಬೈಲು ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಮೃತರನ್ನು ದಿ. ಕರ್ನಲ್ ಕ್ರಾಸ್ತಾ ಮತ್ತು ಅಂಜಲೀನಾ ಕ್ರಾಸ್ತಾ ದಂಪತಿಯ ಪುತ್ರ ರಾಬರ್ಟ್ ಕ್ರಾಸ್ತಾ (50) ಎಂದು ಗುರುತಿಸಲಾಗಿದೆ.
ಶುಕ್ರವಾರ ಮುಂಜಾನೆ ತಮ್ಮ ಮಲಗುವ ಕೋಣೆಯಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಕೆಳಗಿಳಿಸಿ ಮುಳ್ಳೇರಿಯ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಅವಿವಾಹಿತರಾಗಿದ್ದ ರಾಬರ್ಟ್ ಕ್ರಾಸ್ತಾ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರು ಸಹೋದರರಾದ ಬರ್ನಾರ್ಡ್ ಕ್ರಾಸ್ತಾ, ಹೆನ್ರಿ ಕ್ರಾಸ್ತಾ ಹಾಗೂ ಸಹೋದರಿಯರಾದ ಹೆಲೆನ್ ಕ್ರಾಸ್ತಾ, ಪೌಲಿನ್ ಕ್ರಾಸ್ತಾ ಮತ್ತು ಫ್ಲೋರಿನ್ ಕ್ರಾಸ್ತಾ ಅವರನ್ನು ಅಗಲಿದ್ದಾರೆ

0 Comments