Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಜುಲೈ 26ರಂದು ಬೆದ್ರಂಪಳ್ಳದ ಪರಿಶ್ರಮ ಗಾರ್ಡನ್ಸ್‌ನಲ್ಲಿ ಆಷಾಢ ಸಾಹಿತ್ಯ ಸಂಭ್ರಮ

ಪೆರ್ಲ : ಸಾಹಿತ್ಯ ಮತ್ತು ಕಾವ್ಯ ಪ್ರೇಮಿಗಳ ಒಕ್ಕೂಟವಾದ ‘ಸವಿಹೃದಯದ ಕವಿಮಿತ್ರರು ಪೆರ್ಲ’ ನೇತೃತ್ವದಲ್ಲಿ ಜು.26ರಂದು ಮಧ್ಯಾಹ್ನ 10.30ರಿಂದ ಬೆದ್ರಂಪಳ್ಳದ ಪರಿಶ್ರಮ ಗಾರ್ಡನ್ಸ್‌ನಲ್ಲಿ ‘ಆಷಾಢ ಸಾಹಿತ್ಯ ಸಂಭ್ರಮ – 2026’ ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. 

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಪುಷ್ಪಾ ಅಮೆಕ್ಕಳ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ, ಅಡ್ಯನಡ್ಕ ಜನತಾ ಶಿಕ್ಷಣ ಸೊಸೈಟಿ ಆಡಳಿತಾಧಿಕಾರಿ ರಮೇಶ್ ಬಾಯಾರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 

ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಅವರು ಆಷಾಢದ ವಿಶೇಷತೆಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಖ್ಯಾತ ವ್ಯಂಗ್ಯ ಚಿತ್ರಕಾರ ವೆಂಕಟ್ ಭಟ್ ಎಡನೀರು ಅವರ ವ್ಯಂಗ್ಯಚಿತ್ರ ಪ್ರದರ್ಶನವನ್ನು ಸಾಹಿತಿ, ಸಂಘಟಕ ಬಾಲಕೃಷ್ಣ ನಾಯ್ಕ್ ಏಳ್ಕಾನ ಉದ್ಘಾಟಿಸುವರು. ಹಿರಿಯ ಬರಹಗಾರ ಹರೀಶ್ ಶೆಣೈ ಪೆರ್ಲ, ಹಿರಿಯ ಪತ್ರಕರ್ತ ವಿ.ಜಿ.ಕಾಸರಗೋಡು, ವೆಂಕಟ್ ಭಟ್ ಎಡನೀರು, ಹಿಲ್ ಟಾಪ್ ಡಿಸೈನರ್ ಮತ್ತು ಡೆವಲಪ್ಪರ್ಸ್ ಸಂಸ್ಥೆಯ ಸ್ಥಾಪಕಿ ದಿವ್ಯಾಗಟ್ಟಿ ಪರಕ್ಕಿಲ, ಪತ್ರಕರ್ತ ಜಯ ಮಣಿಯಂಪಾರೆ ಹಾಗೂ ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ.

ಮಧ್ಯಾಹ್ನ 1ರಿಂದ ಜಯಪ್ರಕಾಶ್ ಮಣಿಯಂಪಾರೆ ನೇತೃತ್ವದ 'ಶ್ರೀ ದುರ್ಗಾ ಮೆಲೊಡೀಸ್ ಮಣಿಯಂಪಾರೆ' ತಂಡದಿಂದ ಸುಮಧುರ ‘ಆಷಾಢ ಕಾವ್ಯ ಗಾನ’ ಸಾಂಸ್ಕೃತಿಕ ಕಾರ್ಯಕ್ರಮ, 2.30ರಿಂದ ಖ್ಯಾತ ಸಾಹಿತಿ ಹಾಗೂ ವಿಮರ್ಶಕ ಸುಂದರ ಭಟ್ ಕಾನ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಚಾಲನೆ ನೀಡಲಿದ್ದಾರೆ. 

ಕರಾವಳಿ ಕಾವಲು ಪಡೆಯ ನಿವೃತ್ತ ಎಸ್ ಐ ಪರಮೇಶ್ವರ ನಾಯ್ಕ ಬಾಳೆಗುಳಿ ಹಾಗೂ ಬಹುಮುಖ ಪ್ರತಿಭೆ ಹರ್ಷಿತಾ ಪಳ್ಳಕಾನ ಭಾಗವಹಿಸಲಿದ್ದಾರೆ. ಗಡಿನಾಡಿನ ಸಾಹಿತ್ಯಾಸಕ್ತರು, ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಾಹಿತ್ಯ ಹಬ್ಬವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.


*ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್*


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement