ಬೆಳ್ತಂಗಡಿ : ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಂಗ್ಲೆಗುಡ್ಡೆಯಲ್ಲಿ ನೂರಾರು ಮಹಿಳೆಯರ ಕೊಲೆ, ಅತ್ಯಾಚಾರ ನಡೆದು ಶವಗಳನ್ನು ಹೂತು ಹಾಕಲಾಗಿದೆ ಎಂದು ರಾಜ್ಯಾದ್ಯಂತ ಸೃಷ್ಟಿಸಲಾಗಿದ್ದ ಆರೋಪಗಳ ಸತ್ಯಾಸತ್ಯತೆ ವಿಶೇಷ ತನಿಖಾ ತಂಡ (SIT) ನಡೆಸಿದ ಸುದೀರ್ಘ ಹಾಗೂ ವೈಜ್ಞಾನಿಕ ತನಿಖೆ ಮತ್ತು ಎಫ್‌ಎಸ್‌ಎಲ್ (FSL) ನೀಡಿರುವ ಡಿಎನ್ಎ ವರದಿಗಳ ಪ್ರಕಾರ ಮೂರು ಅಸ್ಥಿಪಂಜರಗಳು ವಿವಿಧ ಜಿಲ್ಲೆಗಳಿಂದ ಕಾಣೆಯಾಗಿದ್ದ ಪುರುಷರದ್ದು ಎಂದು ಗುರುತಿಸಲಾಗಿದೆ.
ಪ್ರಕರಣದ ಆರೋಪಿ ಬುರುಡೆ ಚಿನ್ನಯ ತಾನೇ ಯುವತಿಯರ ಮಹಿಳೆಯರ ಶವಗಳನ್ನು ತೋರಿಸಿದ ಜಾಗದಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ಕಾರ್ಯಚರಣೆ ನಡೆಸಿದ್ದರು. ಇದರಲ್ಲಿ ಒಟ್ಟು ಏಳು ಅಸ್ಥಿಪಂಜರಗಳ ಅವಶೇಷಗಳು ಹಾಗೂ ಕೆಲವು ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಪತ್ತೆ ಕಾರ್ಯವು ಸಾರ್ವಜನಿಕರಲ್ಲಿ ಭಾರೀ ಕುತೂಹಲ ಹಾಗೂ ವಿವಾದವನ್ನು ಹುಟ್ಟುಹಾಕಿತ್ತು. ಆದರೆ, ವೈಜ್ಞಾನಿಕ ಪರಿಶೀಲನೆಗಾಗಿ ಈ ಅಸ್ಥಿಪಂಜರಗಳನ್ನು ಎಫ್‌ಎಸ್‌ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಜುಲೈ 15 ರಂದು ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಹಾಗೂ ಎಫ್‌ಎಸ್‌ಎಲ್ ಡಿಎನ್ಎ ಪರೀಕ್ಷೆಯ ಫಲಿತಾಂಶದಲ್ಲಿ ಅಚ್ಚರಿಯ ಸತ್ಯಗಳು ಹೊರಬಿದ್ದಿವೆ.
ಡಿಎನ್ಎ ಪರೀಕ್ಷೆಯಲ್ಲಿ ದೃಢಪಟ್ಟ ಮೂವರ ಗುರುತು ಪತ್ತೆಯಾಗಿದ್ದು ಅವು ಪುರುಷರದ್ದು (ಮಹಿಳೆಯರದ್ದಲ್ಲ) ಎಂಬುದು ಡಿಎನ್ಎ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ನಿವಾಸಿ ಯು.ಬಿ. ಅಯ್ಯಪ್ಪ (70) ಎಂಬವರು 25-06-2017 ರಲ್ಲಿ ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿ ವಾಪಸ್ ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ಕುಟ್ಟ ವೃತ್ತದ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ನೊಂದು ಆದಿಶೇಷ ನಾರಾಯಣ (27) ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ. ಇವರು 02-10-2013 ರಂದು ಬೆಂಗಳೂರು ಬಾಣಸವಾಡಿಯಿಂದ ಮನೆಗೆ ಬಂದು ಮೊಬೈಲ್ ಇಟ್ಟು ನಾಪತ್ತೆಯಾಗಿದ್ದರು. ಮೂರನೇಯದ್ದು ಕೃಷ್ಣಪ್ಪ (85) ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ನಿವಾಸಿ. ಇವರು 22-10-2024 ರಂದು ಏಕಾಏಕಿ ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದರು. ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಅಂತಿಮ ವರದಿಯಂತೆ, ಮೂರು ಕುಟುಂಬದವರು ನಿಯಮಾನುಸಾರ ಎಸ್‌ಐಟಿಗೆ ಮನವಿ ಸಲ್ಲಿಸಿದರೆ, ಡಿಎನ್ಎ ಮೂಲಕ ದೃಢಪಟ್ಟಿರುವ ತಮ್ಮವರ ಅಸ್ಥಿಪಂಜರಗಳನ್ನು ಪಡೆದುಕೊಳ್ಳಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. ವೈಜ್ಞಾನಿಕ ಸಾಕ್ಷ್ಯಾಧಾರಗಳು ಮತ್ತು ಎಸ್‌ಐಟಿಯ ತನಿಖೆಯು ಮುಂದುವರಿಯುತ್ತಿದ್ದು ಪ್ರಕರಣಕ್ಕೆ ಅಂತಿಮ ತೀರ್ಪು ಕಲ್ಪಿಸಲಿದೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments