Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಜುಲೈ ತಿಂಗಳ ಕ್ಷೇಮ ಪಿಂಚಣಿ ನಾಳೆಯಿಂದ ವಿತರಣೆ ಆರಂಭ; 1,095 ಕೋಟಿ ರೂ ಬಿಡುಗಡೆಗೊಳಿಸಿದ ಕೇರಳ ಸರಕಾರ

 

ತಿರುವನಂತಪುರಂ: ಕೇರಳ ಸರ್ಕಾರ ಜುಲೈ ತಿಂಗಳ ಕ್ಷೇಮ ಪಿಂಚಣಿಯನ್ನು ನಾಳೆಯಿಂದ (ಜುಲೈ24) ವಿತರಣೆ ಮಾಡಲಿದ್ದು, ಇದಕ್ಕಾಗಿ 1,095 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಒಟ್ಟು 51.7 ಲಕ್ಷ ಫಲಾನುಭವಿಗಳಿಗೆ ತಲಾ 2,000 ಪಿಂಚಣಿ ನೀಡಲಾಗುತ್ತದೆ. ಆಗಸ್ಟ್ 3ರೊಳಗೆ ಪಿಂಚಣಿ ವಿತರಣೆ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ. ಇದೇ ವೇಳೆ, ವಿವಿಧ ಕ್ಷೇಮ ನಿಧಿ ಮಂಡಳಿಗಳ ಪಿಂಚಣಿಯನ್ನೂ ನಾಳೆಯಿಂದಲೇ ವಿತರಿಸಲಾಗುತ್ತದೆ. ಕೃಷಿ ಕಾರ್ಮಿಕರ ಪಿಂಚಣಿ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ, ಅಂಗವಿಕಲರ ಪಿಂಚಣಿ ಹಾಗೂ ವಿಧವಾ ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಶೀಘ್ರದಲ್ಲೇ ಹಣ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ.

Post a Comment

0 Comments

ಜಾಹೀರಾತು

Responsive Advertisement