Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಶಬರಿಮಲೆ ಚಿನ್ನ ಚೆನೈಗೆ ಸಾಗಾಟ ಪ್ರಕರಣದ ತನಿಖೆಗೆ ಮಾಜಿ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಎಸ್‌ಐಟಿ ವಶಕ್ಕೆ

ತಿರುವನಂತಪುರ : ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವಿದಾಂಕೂರ್ಕಾಜಿ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಅವರನ್ನು ವಿಶೇಷ ತನಿಖಾ ತಂಡ ವಶಕ್ಕೆ ಪಡೆದುಕೊಂಡಿದೆ. ಗುರುವಾರ ಬೆಳಿಗ್ಗೆ ತಿರುವನಂತಪುರಂನಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆದ ಅಧಿಕಾರಿಗಳು, ಬಳಿಕ ಅವರನ್ನು ಕ್ರೈಂ ಬ್ರಾಂಚ್ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.

ಶಬರಿಮಲೆ ಸನ್ನಿದಾನದ ದ್ವಾರಪಾಲಕರ ಶಿಲ್ಪಗಳ ಮೇಲಿದ್ದ ಚಿನ್ನದ ಲೇಪನವನ್ನು ನಿಯಮ ಉಲ್ಲಂಘಿಸಿ ಚೆನ್ನೈಗೆ ಸಾಗಿಸಿದ ಪ್ರಕರಣದಲ್ಲಿ ಪ್ರಶಾಂತ್ ಅವರ ಪಾತ್ರವಿದೆ ಎಂದು ಎಸ್‌ಐಟಿ ತನಿಖೆಯಲ್ಲಿ ಪತ್ತೆಯಾಗಿದೆ. ಈ ಕುರಿತು ಸಾಕ್ಷ್ಯಾಧಾರಗಳಿರುವ ವರದಿಯನ್ನು ಎಸ್‌ಐಟಿ ಈಗಾಗಲೇ ಕೇರಳ ಹೈಕೋರ್ಟ್‌ಗೆ ಸಲ್ಲಿಸಿದೆ. ಪ್ರಶಾಂತ್ ವಿರುದ್ಧ ಕ್ರಿಮಿನಲ್ ಸಂಚು, ನಕಲಿ ದಾಖಲೆ ಸೃಷ್ಟಿ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ. ತಮ್ಮನ್ನು ಯಾವುದೇ ಕ್ಷಣದಲ್ಲಿ ಬಂಧಿಸಬಹುದು ಎಂದು ಪ್ರಶಾಂತ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಕೆಲವೇ ಗಂಟೆಗಳಲ್ಲೇ ಎಸ್‌ಐಟಿ ಅವರನ್ನು ವಶಕ್ಕೆ ಪಡೆದಿದೆ.

ಈ ಪ್ರಕರಣದಲ್ಲಿ ತಂತ್ರಿ ಕಂಠರರ್ ರಾಜೀವರ್, ಸ್ಪಾನ್ಸರ್ ಉಣ್ಣಿಕೃಷ್ಣನ್ ಪೊಟ್ಟಿ, ಮಾಜಿ ದೇವಸ್ವಂ ಮಂಡಳಿ ಸದಸ್ಯ ಎ. ಅಜಿಕುಮಾರ್, ಮಾಜಿ ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ಮುರಾರಿ ಬಾಬು, ಮಾಜಿ ತಿರುವಾಭರಣ ಆಯುಕ್ತ ರಜಿಲಾಲ್, ಹಾಗೂ ಚೆನ್ನೈನ ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆಯ ಮಾಲೀಕ ಪಂಕಜ್ ಭಂಡಾರಿ ಸೇರಿದಂತೆ ಇನ್ನೂ ಹಲವು ಮಂದಿಯ ಹೆಸರುಗಳೂ ತನಿಖೆಯಲ್ಲಿ ಉಲ್ಲೇಖಗೊಂಡಿವೆ.


*ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್*


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial


#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement