ಏತಡ್ಕ: ಇಲ್ಲಿನ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜುಲೈ 11ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಹಲಸಿನ ಅಪ್ಪ ಸೇವೆ ಹಾಗೂ ಬಲಿವಾಡು ಕೂಟ ಸೇವೆ ಆಯೋಜಿಸಲಾಗಿದೆ.
ದೇವಸ್ಥಾನದ ಸಂಪ್ರದಾಯದಂತೆ ನಡೆಯಲಿರುವ ಈ ವಿಶೇಷ ಸೇವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಸೇವೆ ಮಾಡಲು ಇಚ್ಛಿಸುವವರು 94958 59552 ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

0 Comments