ಬೆಂಗಳೂರು : ಕೆಎಂಎಫ್ ಉತ್ಪನ್ನಗಳಾದ ನಂದಿನಿ ತುಪ್ಪ ಮತ್ತು ಬೆಣ್ಣೆ ದರ ಏರಿಕೆಯಾಗಿದೆ ತುಪ್ಪದ ಬೆಲೆ ಕಿ.ಗ್ರಾಂಗೆ 15 ರೂ.ಹಾಗೂ ಬೆಣ್ಣೆ ದರ ಕಿ.ಗ್ರಾಂಗೆ 22 ರೂ. ದರ ಹೆಚ್ಚಿಸಲಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ತರಲಾಗಿದೆ. ಸದ್ಯ ತುಪ್ಪಕಿ.ಗ್ರಾಂಗೆ 700 ರೂಪಾಯಿ ಇತ್ತು. ಇಂದಿನಿಂದ ನಂದಿನಿ ತುಪ್ಪ ಕಿ.ಗ್ರಾಂಗೆ 715 ರೂಪಾಯಿ ನಿರ್ಧರಿಸಲಾಗಿದೆ. ಬೆಣ್ಣೆ ಅರ್ಧ ಕಿ.ಗ್ರಾಂಗೆ 610 ರೂಪಾಯಿ ಇತ್ತು, ಇಂದಿನಿಂದ 660 ರೂಪಾಯಿಗೆ ಏರಿಕೆಯಾಗಿದೆ ಎಂದು ಕೆಎಂಎಫ್ ತಿಳಿಸಿದೆ.
ಹಾಲಿನ ಉತ್ಪನ್ನಗಳ ದರ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಿದೆ. ತುಪ್ಪ, ಬೆಣ್ಣೆ ಖರೀದಿ ದುಬಾರಿಯಾಗಿದೆ. ಇದರಿಂದ ಗೃಹ ಬಳಕೆ ಹಾಗೂ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments