ತಿರುವನಂತಪುರ : ತಿಂಗಳ ಹಿಂದೆ ವಿವಾಹ ನಡೆದು ಪತಿ ಗಲ್ಫ್ ಗೆ ತೆರಳಿದ ಬಳಿಕ ಪತ್ನಿ ಮನೆಯೊಳಗೆ ಆತ್ಮಹತ್ಯೆಗೈದ ಘಟನೆ ವರ್ಕಲದಲ್ಲಿ ನಡೆದಿದೆ. ಇಲ್ಲಿನ ರತಿಕ್ಕಲ್ ನಿವಾಸಿ ನಾಜಿಯಾ (19) ಮೃತಪಟ್ಟ ಯುವತಿ. ನಿನ್ನೆ ಸಂಜೆ ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ಬೆಳಿಗ್ಗೆ ಸಾವು ದೃಢಪಟ್ಟಿದೆ. ನಾಜಿಯಾ ಅವರ ಮದುವೆ ಎರಡು ತಿಂಗಳ ಹಿಂದೆ ನಡೆದಿತ್ತು. ನಾಜಿಯಾ ಅವರ ಪತಿ ಅನ್ಸಾರ್ ಮದುವೆಯಾಗಿ 13 ದಿನಗಳ ನಂತರ ಗಲ್ಫ್‌ಗೆ ಮರಳಿದರು. ಸಾವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ. ವರ್ಕಲ ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
.png)
0 Comments