Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ತನ್ನ ವಿರುದ್ಧ ಸುಳ್ಳು ಪ್ರಚಾರ ನಡೆಸುವರಿಗೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಪಿ.ಕೆ. ಶ್ರೀಮತಿ ಟೀಚರ್


ಕಣ್ಣೂರು:ತಮ್ಮ ವಿರುದ್ಧ ಕೆಲವು ಆನ್‌ಲೈನ್ ಮಾಧ್ಯಮಗಳು, ಸ್ಯಾಟಲೈಟ್ ಚಾನೆಲ್‌ಗಳು ಹಾಗೂ ಪತ್ರಿಕೆಗಳು ಸುಳ್ಳು ಸುದ್ದಿ ಮತ್ತು ಅಪಪ್ರಚಾರ ನಡೆಸುತ್ತಿವೆ ಎಂದು ಆರೋಪಿಸಿ ಸಿಪಿಐ(ಎಂ) ಹಿರಿಯ ನಾಯಕಿ ಪಿ.ಕೆ. ಶ್ರೀಮತಿ ಮಾಧ್ಯಮಗಳ ಮುಂದೆ ಭಾವುಕರಾಗಿ ಕಣ್ಣೀರಿಟ್ಟರು. ತಾವು ಪಿ.ಆರ್. ಕೃಷ್ಣನ್ ಎಂಬ ಶಾಸಕರ ಪತ್ನಿ ಎಂಬ ಹೆಸರಿನಲ್ಲಿ ಕುಟುಂಬ ಪಿಂಚಣಿ ಪಡೆಯುತ್ತಿದ್ದಾರೆ ಎಂಬ ರೀತಿಯ ಸುದ್ದಿ ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಯಾವುದೇ ವಾಸ್ತವಾಂಶ ಪರಿಶೀಲಿಸದೇ ತಮ್ಮ ಮಾನಹಾನಿ ಮಾಡುವ ಉದ್ದೇಶದಿಂದಲೇ ಈ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ ಎಂದು ಶ್ರೀಮತಿ ಆರೋಪಿಸಿದರು. ಕಳೆದ 50 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದರೂ, ಇಂತಹ ಸುದ್ದಿ ಪ್ರಕಟಿಸುವ ಮೊದಲು ತಮ್ಮನ್ನು ಒಮ್ಮೆ ಕೂಡ ಸಂಪರ್ಕಿಸಿ ಸತ್ಯಾಸತ್ಯತೆ ವಿಚಾರಿಸಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ಸಾಕ್ಷ್ಯಗಳನ್ನು ಈಗಾಗಲೇ ಸಂಗ್ರಹಿಸಿ, ಎರಡು ದಿನಗಳ ಹಿಂದೆಯೇ ತಮ್ಮ ವಕೀಲರಿಗೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯ ಘನತೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಇಂತಹ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಈ ಹಿಂದೆಯೂ ತಮ್ಮ ವಿರುದ್ಧ ಇಂತಹ ತಪ್ಪು ಪ್ರಚಾರಗಳು ನಡೆದಿವೆ ಎಂದು ಪಿ.ಕೆ. ಶ್ರೀಮತಿ ಹೇಳಿದರು.

Post a Comment

0 Comments

ಜಾಹೀರಾತು

Responsive Advertisement