ಕುಟ್ಟಿಕ್ಕೋಲು : ಅಪಘಾತಗಳು ಅಥವಾ ವಯೋಸಹಜ ಕಾಯಿಲೆಗಳ ಪರಿಣಾಮ ದೈಹಿಕ ಅಶಕ್ತತೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ವಿವಿಧ ಸಹಾಯಕ ಸಾಧನಗಳನ್ನು ಉಚಿತವಾಗಿ ಒದಗಿಸುವ ರಾಷ್ಟ್ರೀಯ ವಯೋಶ್ರೀ ಯೋಜನೆ'ಯ ಪ್ರಯೋಜನವನ್ನು ಅರ್ಹರು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.
ಅವರು ಪ್ರಧಾನಮಂತ್ರಿ ದಿವ್ಯಶ ಕೇಂದ್ರ, ಬಿಜೆಪಿ ಕಾಸರಗೋಡು ಜಿಲ್ಲಾ ಹೆಲ್ಪ್ ಡೆಸ್ಕ್ ಹಾಗೂ ಬಿಜೆಪಿ ಮುಳಿಯಾರ್ ಮಂಡಲ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕುಟ್ಟಿಕ್ಕೋಲ್‌ನ ಸೋಪಾನಂ ಆಡಿಟೋರಿಯಂನಲ್ಲಿ ಆಯೋಜಿಸಲಾದ ರಾಷ್ಟ್ರೀಯ ವಯೋಶ್ರೀ ಯೋಜನೆ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮುಳಿಯಾರು ಮಂಡಲ ಅಧ್ಯಕ್ಷ ದಿಲೀಪ್ ಮುಳಿಯಾರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ದಿವ್ಯಶ ಕೇಂದ್ರದ ಪರವಾಗಿ ಡಾ. ಗೋಕುಲ್, ಆಡಿಯಾಲಜಿಸ್ಟ್ ಡಾ. ಹರಿತ ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಮುಳಿಯಾರ್ ಮಂಡಲ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮಾನಡಕ್ಕಂ, ಕುಟ್ಟಿಕ್ಕೋಲ್ ಪಂಚಾಯತ್ ಸಮಿತಿ ಅಧ್ಯಕ್ಷ ಮಣಿ ಕಾವುಂಕಲ್ಲು ರಾಜೇಶ್ ಪಾಂಡಿ,ಮಿಥುನ್, ಹಾಗೂ ವಿವಿಧ ಪಂಚಾಯತ್‌ಗಳ ಜನಪ್ರತಿನಿಧಿಗಳಾದ ಪ್ರಮೀಳಾ ಸಿ. ನಾಯಕ್,ಸಿಂಧು ಮೋಹನ್,ವಿದ್ಯಾ ಮಹೇಶ್,ಉಲ್ಲಾಸ್ ಎಂ,ಜಯಕೃಷ್ಣನ್ ಮತ್ತು ಅನನ್ಯ ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 200 ಮಂದಿ ಹಿರಿಯ ನಾಗರಿಕರು ಆರೋಗ್ಯ ತಪಾಸಣೆ ಹಾಗೂ ಯೋಜನೆಯಡಿ ಲಭ್ಯವಿರುವ ಸಹಾಯಕ ಸಾಧನಗಳಿಗಾಗಿ ತಪಾಸಣೆಗೆ ಒಳಪಟ್ಟರು.

0 Comments