ಬದಿಯಡ್ಕ : ಸ್ವಚ್ಛತಾ ಮಿಷನ್, ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಸಹಯೋಗದೊಂದಿಗೆ ಪಂಚಾಯತಿಯ ಆಯ್ಕೆಯಾದ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಹರಿತ ವಿದ್ಯಾಲಯ (ಹಸಿರು ಶಾಲೆ) ಅಭಿಯಾನದ ಚಟುವಟಿಕೆಗಳಿಗೆ ಜಿ.ಎಚ್.ಎಸ್. ಪೆರಡಾಲದಲ್ಲಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮವನ್ನು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ವಾರ್ಡ್ ಸದಸ್ಯೆ ಶಾಸಿನಾ ಅನ್ವರ್ ಅಧ್ಯಕ್ಷತೆ ವಹಿಸಿದ್ದರು. ಹೆಚ್. ಎಂ. ಇನ್‌ಚಾರ್ಜ್ ಮಾಧವನ್ ಮಾಸ್ಟರ್, ಪಿ. ಟಿ. ಎ. ಅಧ್ಯಕ್ಷ ರಾಮ, ಅಸಿಸ್ಟೆಂಟ್ ಸೆಕ್ರೆಟರಿ ಪಿ.ಕೆ.ಸಜಿ, ಹೆಲ್ತ್ ಇನ್ಸ್‌ಪೆಕ್ಟರ್ ಪಿ. ಕೆ. ಬಾಬುರಾಜ್ ಹಾಗೂ ಹರಿತ ಕರ್ಮಸೇನಾ ಕನ್ಸೋರ್ಟಿಯಂ ಅಧ್ಯಕ್ಷೆ ಸುಹರಾ ಮಾತನಾಡಿದರು.
ಸ್ವಚ್ಛತಾ ಮಿಷನ್ ಸಂಪನ್ಮೂಲ ವ್ಯಕ್ತಿ ರಂಜಿನಿ ಅವರು ಸ್ವಚ್ಛತೆಯ ಪ್ರತಿಜ್ಞಾ ವಿಧಿ ಬೋಧಿಸಿ, ವಿಷಯ ಮಂಡನೆ ಮಾಡಿದರು. ಶಿಕ್ಷಕರು, ಹರಿತ ಕರ್ಮ ಸೇನೆಯ ಸದಸ್ಯರು, ಇಕೋ ಕ್ಲಬ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ವಿಂಗಡಣೆ ಕುರಿತು ತರಬೇತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
*ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್*
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments