ಬದಿಯಡ್ಕ : ಬದಿಯಡ್ಕ ಬಂಟರ ಸಂಘದ ಆಶ್ರಯದಲ್ಲಿ ಬಂಟೆರೆನ ಆಟಿದ ಲೇಸ್ ಕಾರ್ಯಕ್ರಮ ಆ.9ಕ್ಕೆ ಮಧ್ಯಾಹ್ನ 2 ಗಂಟೆಯಿಂದ ವಲಮಲೆಯ ಇರಾ ಸಭಾ ಭವನದಲ್ಲಿ ನಡೆಯಲಿದೆ. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಐ.ಸುಬಯ್ಯ ರೈ ಕಾರ್ಯಕ್ರಮ ಉದ್ಘಾಟಿಸುವರು. ಬಂಟರ ಸಂಘ ಬದಿಯಡ್ಕದ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸುವರು. ಡಾ. ಯತೀಶ್ ಕುಮಾರ್ ರೈ ಆಟಿ ತಿಂಗಳ ವಿಶೇಷ ಉಪನ್ಯಾಸ ನೀಡುವರು. ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು, ಚಿದಾನಂದ ಆಳ್ವ ಮಂಜಕೋಟ್ಯ, ಸಂತೋಷ್ ಕುಮಾರ್ ಶೆಟ್ಟಿ ಬಜಗುತ್ತು, ಅಶೋಕ್ ರೈ ಕೊರೆಕ್ಕಾನ, ಗಂಗಾಧರ ಆಳ್ವ ಪೆರಡಾಲ, ರವೀಂದ್ರನಾಥ ಶೆಟ್ಟಿ ವಳಮಲೆ, ಗಿರೀಶ್ ರೈ ವಳಮಲೆ, ಜಗನ್ನಾಥ ರೈ ಕೊರೆಕ್ಕಾನ, ಉಮೇಶ್ ರೈ ಮೇಗಿನ ಕಡಾರು, ಜಗನ್ನಾಥ ರೈ ಪೆರಡಾಲ ಗುತ್ತು, ಸಂತೋಷ್ ಕುಮಾರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಕಡಾರು ಬೀಡು, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ದಯಾನಂದ ರೈ ಕಡಾರು, ಅಶ್ವಿನಿ ಪ್ರದೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿರುವರು. ಬಳಿಕ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಬಂಟ ಜನಪ್ರತಿನಿಧಿಗೆ ಅಭಿನಂದನೆ, ಎಸ್ ಎಲ್ ಸಿ ಪ್ಲಸ್ ಟು ವಿದ್ಯಾರ್ಥಿಗಳಿಗೆ ಎಲ್ಲ ವಿಷಯದಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆಟಿ ತಿಂಡಿ ತಿನಿಸುಗಳ ಪ್ರದರ್ಶನ, ಬಂಟರ ಶೈಲಿಯ ಉಪಹಾರ ಏರ್ಪಡಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
0 Comments