ತಿರುವನಂತಪುರ : ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಇಂದು ಪ್ರವಾಹ ಮತ್ತು ಮಳೆಯಿಂದ ಹಾನಿಗೊಳಗಾದ ಪತ್ತನಂತಿಟ್ಟ ಜಿಲ್ಲೆಯ ರನ್ನಿ ಹಾಗೂ ಆರಣ್ಮುಳ ಪ್ರದೇಶಗಳಿಗೆ ಭೇಟಿ ನೀಡಿದರು.
ಮುಖ್ಯಮಂತ್ರಿಯವರು ವಿಪತ್ತು ನಿರ್ವಹಣಾ ಕಾರ್ಯಗಳ ಪ್ರಗತಿ ಹಾಗೂ ಪರಿಹಾರ ಶಿಬಿರಗಳಲ್ಲಿ ಒದಗಿಸಲಾಗುತ್ತಿರುವ ಮೂಲಸೌಕರ್ಯಗಳನ್ನು ನೇರವಾಗಿ ಪರಿಶೀಲಿಸಿ ಸಂತ್ರಸ್ತರಾದ ಶಿಬಿರದ ಜನರೊಡನೆ ಮಾತುಕತೆ ನಡೆಸಿದರು. ಬಳಿಕ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ವಿಪತ್ತು ನಿರ್ವಹಣೆಯಲ್ಲಿ ಸರ್ಕಾರ ಸಮರ್ಪಕ ಸಮನ್ವಯ ಸಾಧಿಸಿಲ್ಲ ಎಂಬ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ ಮುಖ್ಯಮಂತ್ರಿ ಅವರ ಈ ಭೇಟಿ ಮಹತ್ವ ಪಡೆದಿದೆ. ರಾನ್ನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದ ವೇಳೆ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಂದ ಟೀಕೆಗಳು ಕೇಳಿಬಂದಿದ್ದವು.
ಇದೀಗ ಈ ರಾಜಕೀಯ ಚರ್ಚೆಗಳ ನಡುವೆಯೇ ಮುಖ್ಯಮಂತ್ರಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವ ಆಡಳಿತಾತ್ಮಕ ನಿಲುವಿನ ಬಗ್ಗೆ ವ್ಯಾಪಕ ಪ್ರಶಂಸೆ ಕೇಳಿ ಬರುತ್ತಿದೆ.
ರಾನ್ನಿ ಮತ್ತು ಆರಣ್ಮುಳ ಭಾಗಗಳಲ್ಲಿ ಇನ್ನೂ ಪ್ರವಾಹದಂತಹ ಪರಿಸ್ಥಿತಿ ಮುಂದುವರಿದಿದೆ. ಅರಣ್ಯ ಪ್ರದೇಶಗಳಲ್ಲಿ ಕಳೆದ ರಾತ್ರಿ ಮಳೆ ಕಡಿಮೆಯಾಗಿರುವುದು ಸ್ವಲ್ಪ ನಿರಾಳತೆ ತಂದಿದ್ದರೂ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಇನ್ನೂ ಎಚ್ಚರಿಕೆಯಿಂದಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
.jpeg)
0 Comments