Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕನ್ನೆಪ್ಪಾಡಿಯ ಆಶ್ರಯ ಆಶ್ರಮದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆ

ಬದಿಯಡ್ಕ : ನೀರ್ಚಾಲು ಸಮೀಪದ ಕನ್ನೆಪ್ಪಾಡಿಯ ಆಶ್ರಯ ಆಶ್ರಮದಲ್ಲಿ ಜನಸೇವಾ ವಿಶ್ವಸ್ಥ ನಿಧಿ ಟ್ರಸ್ಟ್ ಹಾಗೂ ಶಾರದಾ ಮಹಿಳಾ ಮಂಡಳಿ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆ ಮತ್ತು ಪೂಜಾ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ನೆರವೇರಿತು.

ವಿಘ್ನೇಶ್ವರ ಭಟ್ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಪುಷ್ಪಲತಾ ವಿ.ಕೆ. ಭಟ್ ಗೋಳಿತ್ತಡ್ಕ ಅವರು ಧಾರ್ಮಿಕ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಆಶ್ರಮದಲ್ಲಿ ನಿರಂತರವಾಗಿ ಸತ್ಸಂಗ ಸೇವೆ ಸಲ್ಲಿಸುತ್ತಿರುವ ಮಾಲತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾತೆಯರಿಂದ ಭಜನಾ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

Post a Comment

0 Comments

ಜಾಹೀರಾತು

Responsive Advertisement