ಕುಂಬಳೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕು, ಕುಂಬಳೆ ವಲಯದ ಜ್ಞಾನೋದಯ ಜ್ಞಾನ ವಿಕಾಸ ಹಾಗೂ ಸಿಂಧೂರ ಜ್ಞಾನ ವಿಕಾಸ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಮಹಿಳೆಯರಿಗಾಗಿ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕು ಸದಸ್ಯ ಯೋಗೀಶ್ ಕಡಮಣ್ಣಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ವಲಯಾಧ್ಯಕ್ಷೆ ಜಯಂತಿ, ವಲಯ ಭಜನಾ ಪರಿಷತ್ ಅಧ್ಯಕ್ಷೆ ಗಿರಿಜಾ, ಶಾಲಾ ಮುಖ್ಯ ಶಿಕ್ಷಕಿ ಸುಪ್ರಿಯಾ, ಜನಜಾಗೃತಿ ವಲಯಾಧ್ಯಕ್ಷ ಮಹೇಶ್ ಪುಣಿಯೂರು, ವಲಯ ಮೇಲ್ವಿಚಾರಕ ಅಭಿಷೇಕ್, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುನೀತಾ, ಹೊಲಿಗೆ ತರಬೇತಿ ಶಿಕ್ಷಕ ಶಿವಪ್ಪ ಟೈಲರ್ ಸೇರಿದಂತೆ ಸೇವಾಪ್ರತಿನಿಧಿಗಳಾದ ಸ್ವರ್ಣಲತಾ, ಸಂಧ್ಯಾ, ಈರಮ್ಮ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುವ ಮೂಲಕ ಸ್ವಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮವು ಉತ್ತಮ ಸ್ಪಂದನೆ ಪಡೆಯಿತು.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost
.png)
.jpeg)
0 Comments