ಕಾಸರಗೋಡು : ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 3.750 ಲೀಟರ್ ಕರ್ನಾಟಕ ನಿರ್ಮಿತ ಮದ್ಯ(IMFL)ದೊಂದಿಗೆ ಬಂದಡ್ಕ ಎಕ್ಸೈಸ್ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಂದಡ್ಕ ಮಣಿಮೂಲ ಮೊಟ್ಟ ನಿವಾಸಿ ಟಿ.ಸಿ. ಕುಂಞಿರಾಮನ್ (68) ಎಂದು ಗುರುತಿಸಲಾಗಿದೆ.
ಆರೋಪಿಯ ಮನೆಯ ಸಮೀಪದ ಪೊದೆ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ಕರ್ನಾಟಕ ಮದ್ಯವನ್ನು ಬಂದಡ್ಕ ಎಕ್ಸೈಸ್ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಬಂದಡ್ಕ ಎಕ್ಸೈಸ್ ರೇಂಜ್ ಸಹಾಯಕ ಇನ್‌ಸ್ಪೆಕ್ಟರ್ ಜನಾರ್ದನ ಎ. ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಕಾರ್ಯಾಚರಣೆಯಲ್ಲಿ ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ಜೋಬಿ ಕೆ.ಪಿ., ಅಜೇಶ್ ವಿ. ಮೋಹನ್, ಮಹಿಳಾ ಸಿವಿಲ್ ಎಕ್ಸೈಸ್ ಅಧಿಕಾರಿ ಸಯನ ಕೆ.ವಿ.ಕೆ. ಹಾಗೂ ಚಾಲಕ ರಾಧಾಕೃಷ್ಣನ್ ಎಂ.ಕೆ. ಭಾಗವಹಿಸಿದ್ದರು.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments