ಪಾಲಕ್ಕಾಡ್ : 43ರೂ.ವಿನ ಟಿಕೆಟ್‌ಗಾಗಿ 500 ರೂ. ನೋಟು ನೀಡಿದ ಕಾರಣ ಚಿಲ್ಲರೆ ಹಣವಿಲ್ಲ ಎಂದು ಹೇಳಿ ತೋಟ ಕಾರ್ಮಿಕ ಮಹಿಳೆಯೊಬ್ಬರನ್ನು ಕೆಎಸ್‌ಆರ್‌ಟಿಸಿ ಬಸ್‌ನಿಂದ ಬಲವಂತವಾಗಿ ಕೆಳಗಿಳಿಸಿದ ಘಟನೆ ವರದಿಯಾಗಿದೆ. ಪಾಲಕ್ಕಾಡ್–ನೆಲ್ಲಿಯಾಂಪತಿ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿಯ ಹೊಸ ಹೆಚ್ಚುವರಿ ಸೇವೆಯ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ತಮಿಳುನಾಡು ನಿವಾಸಿಯಾದ ಅಮೃತಾ ಎಂಬ ಮಹಿಳೆಗೆ ಈ ಅನುಭವ ಉಂಟಾಗಿದೆ.
ನೆಲ್ಲಿಯಾಂಪತಿ ವಿಲೇಜ್ ಕಚೇರಿ ಸಮೀಪ ಬಸ್ ನಿಲ್ಲಿಸಿ ಮಹಿಳೆಯನ್ನು ಕೆಳಗಿಳಿಸಲಾಗಿದೆ ಎನ್ನಲಾಗಿದೆ. 43ರೂ. ಟಿಕೆಟ್‌ಗಾಗಿ ಅಮೃತಾ 500 ರೂ.ನೋಟು ನೀಡಿದ್ದರು. ಆದರೆ ಚಿಲ್ಲರೆ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಕಂಡಕ್ಟರ್ ಅವರನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಬಸ್ ಚಾಲಕ ಹಾಗೂ ಕಂಡಕ್ಟರ್ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ, ಮಾರ್ಗ ಮಧ್ಯೆ ಕೆಳಗಿಳಿಸಿದ್ದಾರೆ ಎಂದು ಆರೋಪಿಸಿರುವ ಅಮೃತಾ, ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

0 Comments