Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡಿನಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿಯಿಂದ 44ನೇ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿಯ ಆಶ್ರಯದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕೈಲಾಸ ಕಲ್ಯಾಣ ಮಂಟಪದಲ್ಲಿ 44ನೇ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಜರುಗಿತು.

ಸಾಯಂಕಾಲ ಕಲಶ ಪ್ರತಿಷ್ಠೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಅಧ್ಯಕ್ಷೆ ಅರುಣ ರಾಮಕೃಷ್ಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಹಾಗೂ ಸಾಹಿತಿಯಾದ ಜಯಲಕ್ಷ್ಮಿ ಶಾನ್‌ಭೋಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಇಂದಿನ ಕಾಲಘಟ್ಟದಲ್ಲಿ ಮಾತೆಯರು ಮಕ್ಕಳನ್ನು ಸಂಸ್ಕಾರಯುತರಾಗಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ನಮ್ಮ ಆಚಾರ-ವಿಚಾರಗಳನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡುವ ಜವಾಬ್ದಾರಿ ಮಾತೆಯರ ಮೇಲಿದೆ ಎಂದು ನುಡಿದರು.

ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಗೌರವಾಧ್ಯಕ್ಷೆ ಸುಲೋಚನಾ ಎ.ಟಿ. ನಾಯ್ಕ್ ಹಾಗೂ ಹಿರಿಯ ಮಾರ್ಗದರ್ಶಕಿ ಸವಿತಾ ಟೀಚರ್ ಉಪಸ್ಥಿತರಿದ್ದರು. ಶ್ರೀಲತಾ ಟೀಚರ್ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು.

ಕಾರ್ಯದರ್ಶಿ ಸವಿತಾ ಕಿಶೋರ್ ಅವರು 2025ರ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಶ್ರೀದೇವಿ ರಾವ್ ಸ್ವಾಗತಿಸಿದರು. ಶ್ರೀವಳ್ಳಿ ಕಾರ್ಯಕ್ರಮ ನಿರೂಪಿಸಿದರು. ಲೀಲಾ ಸುಜಯ್ ವಂದಿಸಿದರು.

ಮಹಿಳೆಯರು ಸಾಮೂಹಿಕವಾಗಿ ಶ್ರೀ ಲಲಿತಾ ಸಹಸ್ರನಾಮ ಹಾಗೂ ಲಕ್ಷ್ಮೀ ಸ್ತೋತ್ರ ಪಠಣ ಮಾಡಿದರು. ಅರ್ಚಕ ಕೃಷ್ಣಪ್ರಸಾದ್ ಮುಟ್ಟತ್ತೋಡಿ ಅವರ ನೇತೃತ್ವದಲ್ಲಿ ಮಹಾಪೂಜೆ ಜರುಗಿತು.

ಹಿರಿಯರಾದ ಸುಜಾತ, ಭಾರತೀ ಗಣೇಶ್, ವೀಣಾ ಮೈಂದಪ್ಪ, ಮಾತೃ ಮಂಡಳಿಯ ಕೋಶಾಧಿಕಾರಿ ಸೌಮ್ಯ, ನಗರಸಭಾ ಸದಸ್ಯೆ ದಿವ್ಯಾ ಸಂದೀಪ್, ಪ್ರೇಮಾ, ಶಾರದಾ ರಾವ್, ವೀಣಾ ರಂಗನಾಥನ್, ಶ್ವೇತಾ, ಗೀತಾ ಹಾಗೂ ಸರಸ್ವತಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿ.ಎಚ್.ಪಿ. ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ, ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ, ಧಾರ್ಮಿಕ ನೇತಾರ ಜಯರಾಮ್ ಶೆಟ್ಟಿ, ವಾಮನ್ ರಾವ್ ಬೇಕಲ್, ಕಿಶೋರ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement