ಪೆರ್ಲ: ಬಜಕೂಡ್ಲು ಶ್ರೀ ಶಿವಪ್ರಿಯ ಭಜನಾಮಂಡಳಿಯ ಪ್ರಥಮ ವಾರ್ಷಿಕೋತ್ಸವ, ಅರ್ಧ ಏಕಾಹ ಭಜನೆ ಹಾಗೂ ವಿಶೇಷ ಕಾರ್ತಿಕ ಪೂಜೆ ಸೆ. 6ರಂದು ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಲಿದೆ. ಇದರ ಆಮಂತ್ರಣಪತ್ರಿಕೆ ಬಿಡುಗಡೆ ಸಮಾರಂಭ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದ ಅರ್ಚಕರು, ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೆ. 6ರಂದು ಬೆಳಗ್ಗೆ6.30ರಿಂದ ಸಂಜೆ 6.32ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯುವುದು. ಸಂಜೆ 7ಕ್ಕೆ ಶ್ರೀಮಹಾಲಿಂಗೇಶ್ವರ ದೇವರಿಗೆ ವಿಶೇಷ ಕಾರ್ತಿಕಪೂಜೆ ನಡೆಯುವುದು. 7.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೇಶವ ಭಟ್ ಶುಳುವಾಲಮೂಲೆ ದೀಪ ಪ್ರಜ್ವಲನೆಗೊಳಿಸುವರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್ ಅಧ್ಯಕ್ಷತೆ ವಹಿಸುವರು. ಡಾ. ಕಿಶೋರ್ ಕುಮಾರ್ ರೈ ಶೇಣಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ಬಿ ಪಾಲ್ಗೊಳ್ಳುವರು.
ರಾತ್ರಿ 8.00 ರಿಂದ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯ ಗುರುಗಳಾದ ಸಬ್ಬಣಕೋಡಿ ರಾಮ ಭಟ್ ಮತ್ತು ಬಳಗದವರಿಂದ ಷನ್ಮುಖ ವಿಜಯ ಯಕ್ಷಗಾನ ಪ್ರದರ್ಶನ ನಡೆಯುವುದು.

0 Comments