ತಿರುವನಂತಪುರ : ಓಣಂ ರಜೆ ಮುಗಿಸಿ ವಾಪಸ್ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಂಗಳೂರು ಜಂಕ್ಷನ್–ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲು (06072) ಶನಿವಾರ ಸಂಚರಿಸಲಿದೆ. ಆ.29ರಂದು ಶನಿವಾರ ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ಭಾನುವಾರ ಮುಂಜಾನೆ 4 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣ ತಲುಪಲಿದೆ.
ಕೇರಳದಲ್ಲಿ ಕಾಸರಗೋಡು (11.54), ಕಾಞಂಗಾಡ್ (12.14), ನೀಲೇಶ್ವರ (12.24), ಪಯ್ಯನ್ನೂರು (12.45), ಕಣ್ಣೂರು (1.27), ತಲಶೇರಿ (1.50), ವಡಕರ (2.14), ಕೋಝಿಕ್ಕೋಡು (3.34), ಶೋರ್ನೂರು (4.30) ಹಾಗೂ ಪಾಲಕ್ಕಾಡ್ ಜಂಕ್ಷನ್ (5.30) ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಿರಲಿದೆ.
ರೈಲಿನಲ್ಲಿ ಒಂದು ಎಸಿ ಟೂ-ಟೈರ್, ಮೂರು ಎಸಿ ತ್ರೀ-ಟೈರ್, 10 ಸ್ಲೀಪರ್ ಕ್ಲಾಸ್ ಹಾಗೂ ನಾಲ್ಕು ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಬ್ರೇಕ್ ವ್ಯಾನ್ ಕೋಚ್‌ಗಳು ಇರಲಿವೆ. ಇದೇ ವೇಳೆ ತಿರುವನಂತಪುರ ನಾರ್ತ್–ಸಾಂತ್ರಾಗಾಚಿ ಜಂಕ್ಷನ್ ವಿಶೇಷ ರೈಲು (06058) ಕೂಡ ಇಂದು ಸಂಚರಿಸಲಿದೆ. ಮಧ್ಯಾಹ್ನ 2.40ಕ್ಕೆ ತಿರುವನಂತಪುರದಿಂದ ಹೊರಡುವ ರೈಲು ಸೋಮವಾರ ಮಧ್ಯಾಹ್ನ 2.15ಕ್ಕೆ ಸಾಂತ್ರಾಗಾಚಿ ತಲುಪಲಿದೆ. ಈ ರೈಲು ಕೊಲ್ಲಂ ಜಂಕ್ಷನ್, ಕಾಯಂಕುಳಂ, ಮಾವೇಲಿಕ್ಕರ, ಚೆಂಗನ್ನೂರು, ತಿರುವಲ್ಲ, ಚಂಗನಾಶೇರಿ, ಕೊಟ್ಟಾಯಂ, ಎರ್ನಾಕುಳಂ ಟೌನ್, ಆಲುವ, ತ್ರಿಶ್ಯೂರ್ ಹಾಗೂ ಪಾಲಕ್ಕಾಡ್ ಜಂಕ್ಷನ್‌ಗಳಲ್ಲಿ ನಿಲುಗಡೆ ಹೊಂದಿರಲಿದೆ.

0 Comments