Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಂಜೇಶ್ವರದಲ್ಲಿ ಸಮಾಜಮುಖಿ ಕಾರ್ಯಗಳೊಂದಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವ ಸಂಪನ್ನ

ಮಂಜೇಶ್ವರ : "ರಾಯರ ತತ್ತ್ವಗಳು ಮತ್ತು ಅವರು ತೋರಿದ ಧರ್ಮದ ಹಾದಿ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ" ಎಂದು ಧಾರ್ಮಿಕ ಸಾಮಾಜಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ನುಡಿದರು. ಅವರು ನಿನ್ನೆ ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವದದಲ್ಲಿ ಅನುಗ್ರಹ ಸಂದೇಶ ಸಾರಿದರು. ಗುರು ರಾಘವೇಂದ್ರ ಸ್ವಾಮಿಗಳು ಜಾತಿ, ಮತ ಭೇದವಿಲ್ಲದೆ ಇಡೀ ಮಾನವಕುಲವನ್ನು ಹರಸುವ ಜಗದ್ಗುರುಗಳಾಗಿದ್ದಾರೆ. ಅವರ ಆದರ್ಶಗಳು ಮತ್ತು ಕೃತಿಗಳು ಸಮಾಜಕ್ಕೆ ಸದಾ ದಾರಿದೀಪ" ಎಂದು ಅವರು ನುಡಿದರು. ಶ್ರೀ ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವದ ಅಂಗವಾಗಿ ಪ್ರಧಾನ ಋತ್ವಿಜರಾದ ಶ್ರೀ ಯಾದವ ಶರ್ಮಾ ನೀರ್ಚಾಲ್ ರವರ ಪೌರೋಹಿತ್ಯದಲ್ಲಿ ಶ್ರೀ ಗುರು ರಾಯರ ವಿಶೇಷ ಪಾದಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. 

ಬಳಿಕ ನಡೆದ ಸರಳ ಸಮಾರಂಭದಲ್ಲಿ ರಂಗಭೂಮಿ ಕಲಾವಿದೆ, ಕನ್ನಡ – ತುಳು ಚಲನಚಿತ್ರ ನಟಿ, ನ್ಯಾಷನಲ್ ಫಿಲ್ಡ್ ಅವಾರ್ಡ್ ಪ್ರಶಸ್ತಿ ಪುರಸ್ಕೃತೆ ರೂಪಶ್ರೀ ವರ್ಕಾಡಿ, ಮತ್ತು ರಾಯರ ಪರಮ ಭಕ್ತ, ಪ್ರಬುದ್ಧ ರಂಗ ಕಲಾವಿದ, ತುಳು - ಕನ್ನಡ, ಚಲನಚಿತ್ರ ನಟ, ನಿರ್ದೇಶಕ: ಶ್ರೀ ಜೆ. ಪಿ ತೂಮಿನಾಡ್ ಇವರಿಗೆ ಗೌರವಾರ್ಪಣೆ ನಡೆಯಿತು. ಜೊತೆಗೆ ಮಕ್ಕಳ ಕಲಿಕೆಗಾಗಿ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕಾಗಿ “ಓಂ ಶ್ರೀ ರಾಘವೇಂದ್ರಾಯ ನಮಃ" ಲೇಖನ ಮಾಲೆಯ ಅನಂತ ಕೋಟಿ ಅಷ್ಟಾಕ್ಷರ ಲೇಖನ ಯಜ್ಞದ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು. ಜೊತೆಗೆ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಮೀಯಪದವು ಕೊಡಮಾಡಿದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಉಚಿತ ಹೆಲ್ತ್ ಕಾರ್ಡ್ ವಿತರಣೆ ನಡೆಯಿತು.  ಈ ಸಂದರ್ಭ ಶಶಿಧರ ಶೆಟ್ಟಿ ಜಮ್ಮದ ಮನೆ (ಸುರತ್ಕಲ್), ಆಡಳಿತ ಮೊಕ್ತೇಸರರು: ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಜಮ್ಮದಮನೆ ಹೊಸಬೆಟ್ಟು, ಮಂಜೇಶ್ವರ,  ಅಶ್ವಿನಿ ಎಂ.ಎಲ್ (ಅಧ್ಯಕ್ಷೆ, ಬಿ.ಜೆ.ಪಿ ಕಾಸರಗೋಡು ಜಿಲ್ಲಾ ಸಮಿತಿ),  ಸುಂದರಿ ಆರ್ ಶೆಟ್ಟಿ (ಮಾಜಿ ಅಧ್ಯಕ್ಷೆ, ಮೀಂಜ ಗ್ರಾಮ ಪಂಚಾಯತು,  ಕಮಲಾಕ್ಷಿ ಕೆ.ಪಾವೂರು. (ಉಪಾಧ್ಯಕ್ಷೆ,ಮಂಜೇಶ್ವರ ಬ್ಲಾಕ್ ಪಂಚಾಯತ್.),  ಹೈಮೇಶ್ ಬಿ.ಎಂ (ಗೌರವಾಧ್ಯಕ್ಷರು, ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ.),  ಯಾದವ ಬಡಾಜೆ (ಅಧ್ಯಕ್ಷರು, ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ.), ನ್ಯಾಯವಾದಿ  ನವೀನ್ ರಾಜ್ ಕೆ. ಜೆ. (ಅಧ್ಯಕ್ಷರು,  ಅಯ್ಯಪ್ಪ ಕ್ಷೇತ್ರ ಹೊಸಂಗಡಿ.),  ಉದಯ ಪಾವಳ (ಗುರುಸ್ವಾಮಿ, ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ.),  ಸುದರ್ಶನ ಕುಮಾರ್ ಜೈನ್ (ಪ್ರಮುಖರು, ಜೈನ ಬಸದಿ ಮಂಜೇಶ್ವರ.),  ತುಳಸಿದಾಸ್ ಮಂಜೇಶ್ವರ, (ಅಧ್ಯಕ್ಷರು, ಬಾಕುಡ ಸಮಾಜ ಕೇಂದ್ರೀಯ ಮಂಡಳಿ.) ಮೊದಲಾದವರು  ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭಾಸಂಶನೆಗೈದರು. ರಾಯರ ಭಕ್ತರು ಮಂಜೇಶ್ವರದ ಸಂಸ್ಥಾಪಕರಾದ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ಪತ್ರಕರ್ತ ಜಯ ಮಣಿಯಂಪಾರೆ ನಿರೂಪಿಸಿ, ರಾಯರ ಭಕ್ತರು ಮಂಜೇಶ್ವರದ ಸ್ಥಾಪಕರಾದ ರಾಜೇಶ್ ಕಡಂಬಾರು ವಂದಿಸಿದರು. ಬಳಿಕ ನೆರೆದ ಭಕ್ತರಿಗೆ ಲಘು ಉಪಹಾರ ವಿತರಿಸಲಾಯಿತು.

Post a Comment

0 Comments

ಜಾಹೀರಾತು

Responsive Advertisement