ನೀಲೇಶ್ವರ : ಟೆಂಪೋ ಚಾಲಕನಾಗಿದ್ದ ಯುವಕನೊಬ್ಬನ ಮೃತದೇಹ ಪತ್ನಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಾಯ್ಯೋಂ ಮಾನೂರಿ ಪೊಂಡಿಯ ಬಾಲಕೃಷ್ಣ ಅವರ ಪುತ್ರ ಕೆ. ರಂಜಿತ್ (31) ಮೃತ ಯುವಕ. ಮಂಗಳವಾರ ಮುಂಜಾನೆ ಪಾಲಾತ್ತಡಂ ನೀಲಾಯಿ ಎಂಬಲ್ಲಿರುವ ಪತ್ನಿ ಸರಿತಾ ಅವರ ಮನೆಯ ಶೆಡ್‌ನಲ್ಲಿ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಾಹಿತಿ ತಿಳಿದು ನೀಲೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಮೃತದೇಹವನ್ನು ಕಾಞಂಗಾಡು, ಜಿಲ್ಲಾ ಆಸ್ಪತ್ರೆಗೆ ಸೇರಿದ ಶವಾಗಾರಕ್ಕೆ ಕೊಂಡೊಯ್ದು ಮಹಜರು ನಡೆಸಲಾಯಿತು.

0 Comments