ಕಾಸರಗೋಡು : ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಕರ್ನಾಟಕದ 30 ವರ್ಷದ ಯುವತಿಯನ್ನು ಅಂಬಲತ್ತರಕ್ಕೆ ಕರೆತಂದು ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿದೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಇರಿಯ ನಿವಾಸಿ ಬಶೀರ್ ಹಾಗೂ ಪಳ್ಳಿಕ್ಕೆರೆ ನಿವಾಸಿ ಆಶಿಕ್ ವಿರುದ್ಧ ಅಂಬಲತ್ತರ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಜನವರಿ ಮತ್ತು ಮಾರ್ಚ್ ತಿಂಗಳಲ್ಲಿ ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕೆಲಸ ಕೊಡಿಸುವುದಾಗಿ ಯುವತಿಯ ತಾಯಿಗೆ ಭರವಸೆ ನೀಡಿ ಆರೋಪಿಗಳಲ್ಲಿ ಒಬ್ಬರು ಯುವತಿಯನ್ನು ತಮ್ಮೊಂದಿಗೆ ಕರೆತಂದಿದ್ದರು ಎನ್ನಲಾಗಿದೆ. ಬಳಿಕ ಅಂಬಲತ್ತರದ ಮನೆಯೊಂದರಲ್ಲಿ ಯುವತಿಯನ್ನು ಇರಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಂತರ ಮನೆ ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯನ್ನು ಪಳ್ಳಿಕ್ಕೆರೆ ನಿವಾಸಿಯೊಬ್ಬರಿಗೆ ಒಪ್ಪಿಸಲಾಗಿತ್ತು ಎನ್ನಲಾಗಿದೆ. ಅಲ್ಲಿಯೂ ಯುವತಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಅಂಬಲತ್ತರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

0 Comments