Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅನಧಿಕೃತ ನಾಡ ಸಾರಾಯಿ ಮತ್ತು ಕರ್ನಾಟಕ ಮದ್ಯವನ್ನು ಕೈವಶವಿರಿಸಿದ ಮಹಿಳೆಯ ಸೆರೆ

ಕಾಸರಗೋಡು : ಅನಧಿಕೃತ ನಾಡ ಸಾರಾಯಿ ಮತ್ತು ಕರ್ನಾಟಕ ಮದ್ಯವನ್ನು ಕೈವಶವಿರಿಸಿದ ಮಹಿಳೆಯನ್ನು ಬಂಧಿಸಲಾಗಿದೆ. ಬಂದಡ್ಕ ಬಳಿಯ ಪೆರ್ಲಡ್ಕ ಮುಂತನ್ ಬಜಾರ್ ನಿವಾಸಿ ಜಯವಸಂತ ಪಿ. (46) ಬಂಧಿತ ಆರೋಪಿ. ಬಂದಡ್ಕ ಎಕ್ಸೈಸ್ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ ಶಹಾಬಾಸ್ ಅಹ್ಮದ್ ಎ.ಪಿ. ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ದಾಳಿಯಲ್ಲಿ ಸಹಾಯಕ ಎಕ್ಸೈಸ್ ಇನ್‌ಸ್ಪೆಕ್ಟರ್‌ಗಳಾದ (ಗ್ರೇಡ್) ಗೋಪಿ ಕೆ., ಜನಾರ್ದನನ್ ಕೆ.ಎ., ಸಿಇಒಗಳಾದ ಸುನಿಲ್ ಕುಮಾರ್ ಪಿ.ಕೆ., ಜೋಬಿ ಕೆ.ಪಿ., ಅಜೇಶ್ ವಿ. ಮೋಹನ್, ಮಹಿಳಾ ಸಿಇಒಗಳಾದ ಜಸ್ನಾ ಕೆ. ಚಂದ್ರನ್, ಸಯನಾ ಕೆ.ವಿ.ಕೆ., ಹಾಗೂ ಸಿಇಒ ಡ್ರೈವರ್ ರಾಧಾಕೃಷ್ಣನ್ ಎಂ.ಕೆ. ಪಾಲ್ಗೊಂಡಿದ್ದರು.


Post a Comment

0 Comments

ಜಾಹೀರಾತು

Responsive Advertisement