ನೀರ್ಚಾಲು : ಕಲ್ಯಾಣ ಪಿಂಚಣಿ ದಯೆಯಲ್ಲ, ಅದು ಜನರ ಹಕ್ಕು. ಪಿಂಚಣಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯುಡಿಎಫ್ ಸರ್ಕಾರದ ಕ್ರಮದ ವಿರುದ್ಧ ಬಲವಾದ ಪ್ರತಿಭಟನೆ ನಡೆಸಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ನೀರ್ಚಾಲ್ ಲೋಕಲ್ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕ ಸಭೆ ನಡೆಯಿತು.
ಎಡಪಂಥೀಯ ಸರ್ಕಾರ ಜಾರಿಗೆ ತಂದ ಮಹಿಳಾ ಸುರಕ್ಷತಾ ಪಿಂಚಣಿ ಯೋಜನೆಯನ್ನು ನಿಲ್ಲಿಸಿರುವ ಕ್ರಮದ ವಿರುದ್ಧವೂ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಅಲ್ಲದೆ, ಆರ್‌ಎಸ್‌ಎಸ್ ನಡೆಸುತ್ತಿದೆ ಎನ್ನಲಾದ ದೇವಸ್ಥಾನಗಳಲ್ಲಿನ ಅಕ್ರಮಗಳ ವಿರುದ್ಧವೂ ಪ್ರತಿಭಟನೆ ವ್ಯಕ್ತಪಡಿಸಲಾಯಿತು.
ಕುಂಬಳೆ ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್ ಸಭೆಯನ್ನು ಉದ್ಘಾಟಿಸಿದರು. ಎಂ. ಮದನ್ ಅಧ್ಯಕ್ಷತೆ ವಹಿಸಿದ್ದರು. ಬಿ.ಎಂ. ಸುಬೈರ್ ಸ್ವಾಗತಿಸಿದರು. ಏರಿಯಾ ಸಮಿತಿ ಸದಸ್ಯ ವಿಠಲ್ ರೈ, ಅಡ್ವ. ಪ್ರಕಾಶ್ ಅಮ್ಮಣ್ಣಾಯ, ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಅನ್ನತ್ ಬೀಬಿ, ಬದಿಯಡ್ಕ ಲೋಕಲ್ ಕಾರ್ಯದರ್ಶಿ ಎಂ.ಎಸ್. ಶ್ರೀಕಾಂತ್ ಹಾಗೂ ಡಿವೈಎಫ್‌ಐ ವಲಯ ಕಾರ್ಯದರ್ಶಿ ಯೋಗೀಶ್ ಎಂ.ಎಸ್. ಮಾತನಾಡಿದರು.

0 Comments