Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬೆಳಗದಿರುವ ಬೀದಿ ದೀಪಗಳನ್ನು ತುರ್ತಾಗಿ ದುರಸ್ತಿಪಡಿಸಿ ಕಾರ್ಯಕ್ಷಮಗೊಳಿಸಬೇಕು : ಅಡೂರು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ


ಅಡೂರು: ಅಡೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗದಿರುವ ಬೀದಿ ದೀಪಗಳನ್ನು ತುರ್ತಾಗಿ ದುರಸ್ತಿಪಡಿಸಿ ಕಾರ್ಯಕ್ಷಮಗೊಳಿಸಬೇಕು ಹಾಗೂ ಅಗತ್ಯವಿರುವ ಸ್ಥಳಗಳಲ್ಲಿ ಹೊಸ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಡೂರು ಘಟಕ ದೇಲಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮುಸ್ತಫಾ ಹಾಜಿಗೆ ಮನವಿ ಸಲ್ಲಿಸಿತು.

ಬೀದಿ ದೀಪಗಳು ಬೆಳಗದಿರುವುದರಿಂದ ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಿಗಳು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ರಾತ್ರಿ ಸಂಚರಿಸುವವರ ಸುರಕ್ಷತೆ ಮತ್ತು ಪ್ರದೇಶದ ಸಂಚಾರ ವ್ಯವಸ್ಥೆಯನ್ನು ಪರಿಗಣಿಸಿ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಘಟಕ ಅಧ್ಯಕ್ಷ ಎಂ.ಪಿ. ಮೊಯ್ದೀನ್ ಕುಂಞಿ, ಉಪಾಧ್ಯಕ್ಷ ಸಿ. ಮಾಧವನ್, ಖಜಾಂಚಿ ಎ.ಸಿ. ಚಂದ್ರಶೇಖರನ್ ಸೇರಿದಂತೆ ಘಟಕದ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement