ನೋಖಾ : ರಾಜಸ್ಥಾನದ ನಗರಸಭೆ ಚುನಾವಣೆಯಲ್ಲಿ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಗೆಲುವು ಸಾಧಿಸಿದೆ. ಒಟ್ಟು 45 ಸ್ಥಾನಗಳ ಪೈಕಿ 29 ಸ್ಥಾನಗಳನ್ನು ಗೆಲ್ಲುವ ಮೂಲಕ ಸಿಪಿಐ(ಎಂ) ನಗರಸಭೆಯ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.
ಚುನಾವಣೆಯಲ್ಲಿ ಬಿಜೆಪಿಗೆ 13 ಸ್ಥಾನಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳಿಗೆ 3 ಸ್ಥಾನಗಳು ಲಭಿಸಿವೆ. ಹಲವು ವರ್ಷಗಳಿಂದ ಎನ್‌ಸಿಪಿ ಮತ್ತು ಬಿಜೆಪಿ ಪರ್ಯಾಯವಾಗಿ ಆಡಳಿತ ನಡೆಸುತ್ತಿದ್ದ ನೋಖಾ ನಗರಸಭೆಯಲ್ಲಿ ಇದೀಗ ಸಿಪಿಐ(ಎಂ) ಅಧಿಕಾರಕ್ಕೆ ಬಂದಿದೆ.
ಜೈಪುರ, ಉದಯಪುರ ಹಾಗೂ ಅಜ್ಮೇರ್ ನಗರಸಭೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಜೋಧ್‌ಪುರ ಮತ್ತು ಪಾಲಿ ನಗರಸಭೆಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಒಟ್ಟು 7,712 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 3,181 ವಾರ್ಡ್‌ಗಳಲ್ಲಿ, ಕಾಂಗ್ರೆಸ್ 2,875 ವಾರ್ಡ್‌ಗಳಲ್ಲಿ ಹಾಗೂ ಸ್ವತಂತ್ರ ಅಭ್ಯರ್ಥಿಗಳು 1,656 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ.

0 Comments