Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಚೇವಾ ತ್ಯಾಂಪಣ್ಣ ಭಂಡಾರಿ ನಿಧನ

ಪುತ್ತಿಗೆ : ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಹಾಗೂ ಬಿಜೆಪಿಯ ಹಿರಿಯ ಸದಸ್ಯರಾದ ಮುಗು ಸಮೀಪದ ಚೇವಾ ತ್ಯಾಂಪಣ್ಣ ಭಂಡಾರಿ (76) ಇಂದು ನಿಧನರಾದರು. ಮೃತರು ಪಾರಂಪರಿಕ ಕೃಷಿಕರಾಗಿದ್ದು ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಲ್ಲಿ ಧಾರ್ಮಿಕ ಮುಂದಾಳುವಾಗಿ ಗುರುತಿಸಿಕೊಂಡಿದ್ದರು. ಮುಂಡಿತಡ್ಕ ವಿಷ್ಣುಮೂರ್ತಿ ಸೇವಾಸಮಿತಿ  ಪ್ರಧಾನ ಸದಸ್ಯರಾಗಿದ್ದರು. 

ತುರ್ತು ಪರಿಸ್ಥಿತಿ ಸಂದರ್ಭದ  ಹೋರಾಟಗಾರರಾಗಿದ್ದ ಇವರು ಪುತ್ತಿಗೆಯ ಪ್ರತಿಷ್ಠಿತ ಎಸ್. ಕೆ. ಎಸ್  ಆರ್ಟ್ಸ್ &ಸ್ಪೋರ್ಟ್ಸ್ ಕ್ಲಬ್ ನ ಹಿರಿಯ ಸದಸ್ಯರಾಗಿದ್ದಾರೆ. ಉತ್ತಮ ನಾಟಕ ನಟರಾಗಿದ್ದ ಇವರು ಹಲವು ತುಳು ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ಇವರ ಪತ್ನಿ ಪವನಾಕ್ಷಿ ಹತ್ತು ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಮೃತರು ಮಕ್ಕಳಾದ ದುರ್ಗಾ ಪ್ರಸಾದ್ ಭಂಡಾರಿ, ಮಮತ, ವನಿತಾ, ಸೊಸೆ ವಿನಯಾ, ಅಳಿಯಂದಿರಾದ ರಾಜೇಶ್ ರೈ, ರತ್ನಾಕರ ಶೆಟ್ಟಿ, ಸಹೋದರ ನಿವೃತ್ತ ಶಿಕ್ಷಕ ಉಮಾನಾಥ ಭಂಡಾರಿ, ಸಹೋದರಿಯರಾದ ಲೀಲಾ, ವಿನೋದ, ಸುಧಾ ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವನ್ನಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ ಬೆಳಗ್ಗೆ ಸ್ವಗೃಹದಲ್ಲಿ ನಡೆಯಲಿದೆ ಎಂದು ಮೃತರ‌ ಮನೆಯವರು ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement