ಕಾಸರಗೋಡು : ಮಧೂರಿನಲ್ಲಿ ಆಟೋ ಚಾಲಕರೊಬ್ಬರು ಮನೆಯ ಸಮೀಪ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೈನಡ್ಕದ ದಿ. ಕುಞ್ಞಿರಾಮ ಮಣಿಯಾಣಿಯವರ ಪುತ್ರ ಚಂದ್ರಶೇಖರ ಮಣಿಯಾಣಿ (51) ಮೃತಪಟ್ಟವರು.
ಭಾನುವಾರ ಬೆಳಗ್ಗೆ ಮನೆಯವರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಇನ್‌ಕ್ವೆಸ್ಟ್ ಪ್ರಕ್ರಿಯೆ ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗುವುದು.
ಚಂದ್ರಶೇಖರ ಅವರು ಮಧೂರು ದೇವಸ್ಥಾನದ ಸಮೀಪದ ಆಟೋ ನಿಲ್ದಾಣದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಪ್ರಮೀಳಾ ಹಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಾಯಿ ಸುಶೀಲಾ. ಮಕ್ಕಳಾದ ಮಿಥೇಶ್ (ಬೆಂಗಳೂರು), ಮೋಹಿತ್ ಹಾಗೂ ಪ್ರೀತೇಶ್ ವಿದ್ಯಾರ್ಥಿಗಳಾಗಿದ್ದಾರೆ.

0 Comments