Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪವರ್‌ಕಟ್ ಅವಧಿ ಹೆಚ್ಚಿಸಿದ ಕೆಎಸ್‌ಇಬಿ; ‘ವಿತ್ ಯು’ ಆ್ಯಪ್‌ನಲ್ಲಿ ನಿಯಂತ್ರಣ ಸಮಯದ ಮಾಹಿತಿ

ತಿರುವನಂತಪುರ : ವಿದ್ಯುತ್ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಪವರ್‌ಕಟ್ ಅವಧಿಯನ್ನು ಕೆಎಸ್‌ಇಬಿ ಹೆಚ್ಚಿಸಿದೆ. ಇನ್ನು ಸಂಜೆ 6.45ರಿಂದ ರಾತ್ರಿ 12.45ರವರೆಗೆ ವಿದ್ಯುತ್ ನಿಯಂತ್ರಣ ಜಾರಿಯಲ್ಲಿರಲಿದೆ. ಈ ಹಿಂದೆ ರಾತ್ರಿ 12.30ರವರೆಗೆ ಮಾತ್ರ ನಿಯಂತ್ರಣವಿತ್ತು.

ವಿದ್ಯುತ್ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ತಿಂಗಳು ಪೂರ್ತಿ ವಿದ್ಯುತ್ ನಿಯಂತ್ರಣ ಮುಂದುವರಿಯುವ ಸಾಧ್ಯತೆ ಇದೆ. ವಿದ್ಯುತ್ ನಿಯಂತ್ರಣದ ಸಮಯವನ್ನು ಗ್ರಾಹಕರು ಕೆಎಸ್‌ಇಬಿಯ ‘ವಿತ್ ಯೂ’ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು. ತಿರುವನಂತಪುರ ಜಿಲ್ಲೆಯಲ್ಲಿ ಆ್ಯಪ್‌ನ ಪರೀಕ್ಷೆ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ಸೇವೆ ಲಭ್ಯವಾಗಲಿದೆ.

ಅಣೆಕಟ್ಟುಗಳಲ್ಲಿ ಪ್ರಸ್ತುತ ಶೇ.63ರಷ್ಟು ಮಾತ್ರ ನೀರಿನ ಸಂಗ್ರಹವಿರುವುದರಿಂದ ಜಲವಿದ್ಯುತ್ ಉತ್ಪಾದನೆ ಹೆಚ್ಚಿಸಿ ಸಾಲ ತೀರಿಸುವ ಪರಿಸ್ಥಿತಿಯೂ ಇಲ್ಲ. ಪೀಕ್ ಅವಧಿಗೆ ಅಗತ್ಯವಿರುವ ಅಲ್ಪಾವಧಿ ವಿದ್ಯುತ್ ಖರೀದಿ ಒಪ್ಪಂದಗಳೂ ಲಭ್ಯವಿಲ್ಲ. ರಾತ್ರಿ 12 ಗಂಟೆಯ ಬಳಿಕ 100 ಮೆಗಾವಾಟ್ ಹಾಗೂ ಹಗಲು-ರಾತ್ರಿ ತಲಾ 25 ಮೆಗಾವಾಟ್ ವಿದ್ಯುತ್ ಖರೀದಿಸಲು ಅನುಮತಿ ಕೋರಿ ಕೆಎಸ್‌ಇಬಿ ಮನವಿ ಮಾಡಿದ್ದರೂ ನಿಯಂತ್ರಣ ಆಯೋಗದಿಂದ ಇನ್ನೂ ಆದೇಶ ಹೊರಬಂದಿಲ್ಲ. ಹೀಗಾಗಿ ಪವರ್‌ಕಟ್ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ.

Post a Comment

0 Comments

ಜಾಹೀರಾತು

Responsive Advertisement