Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪತಿ ವಿಡಿಯೋ ಕಾಲ್ ಸ್ವೀಕರಿಸದಿದ್ದಕ್ಕೆ ಮನನೊಂದು ಪತ್ನಿ ಇಲಿ ವಿಷ ಸೇವಿಸಿ ಆತ್ಮಹತ್ಯೆ

ಮಹಬೂಬಾಬಾದ್ : ಪತಿ ವಿಡಿಯೋ ಕಾಲ್ ಸ್ವೀಕರಿಸದಿದ್ದಕ್ಕೆ ಮನನೊಂದು ವಿವಾಹಿತ ಮಹಿಳೆಯೊಬ್ಬರು ಇಲಿ ಪಾಷಾಣ ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಮಹಬೂಬಾಬಾದ್‌ನಲ್ಲಿ ನಡೆದಿದೆ. ಮೃತರನ್ನು ವಾರಂಗಲ್ ಜಿಲ್ಲೆಯ ಅಖಿಲಾ (20) ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆ ಮಹಬೂಬಾಬಾದ್‌ನ ಹುಸೇನ್‌ ಎಂಬುವವರನ್ನು ಮದುವೆಯಾಗಿದ್ದ ಅಖಿಲಾಗೆ ಚಿಕ್ಕ ಮಗುವಿತ್ತು.

ತವರು ಮನೆಯಲ್ಲಿದ್ದ ಅಖಿಲಾ, ಸೆಪ್ಟೆಂಬರ್ 2ರಂದು ಅಳುತ್ತಿದ್ದ ಮಗುವನ್ನು ತೋರಿಸಲು ಪತಿಗೆ ವಿಡಿಯೋ ಕಾಲ್ ಮಾಡಿದ್ದರು. ಆದರೆ ಪತಿ ಕರೆ ಸ್ವೀಕರಿಸದ ಕಾರಣ ತೀವ್ರ ಬೇಸರಗೊಂಡಿದ್ದ ಅವರು, ಬಳಿಕ ಮಹಬೂಬಾಬಾದ್‌ನ ಅತ್ತೆ-ಮಾವನ ಮನೆಗೆ ತೆರಳಿ ಇಲಿ ಪಾಷಾಣ ಸೇವಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement