ಮಂಜೇಶ್ವರ : ಹೊಸಂಗಡಿಯಲ್ಲಿ ಯುವಕನೊಬ್ಬನನ್ನು ತಲೆಗೆ ಕಲ್ಲು ಎತ್ತಿ ಹಾಕಿ ಜಜ್ಜಿದ ಸ್ಥಿತಿಯಲ್ಲಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇದೀಗ ನಡೆದಿರುವುದಾಗಿ ವರದಿಯಾಗಿದೆ
ಕರ್ನಾಟಕ ಮೂಲದ ರಮೇಶ್ ಗೌಡ (42) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹೊಸಂಗಡಿಯಲ್ಲಿರುವ ಹಳೆಯ ಮನೆಯೊಂದರಲ್ಲಿ ರಾತ್ರಿ ಸುಮಾರು 7.45ರ ವೇಳೆಗೆ ತಲೆಗೆ ಕಲ್ಲಿನಿಂದ ಜಜ್ಜಿದ ಸ್ಥಿತಿಯಲ್ಲಿ ರಮೇಶ್ ಅವರ ಮೃತದೇಹ ಪತ್ತೆಯಾಗಿದೆ.
ಮಾಹಿತಿ ಲಭಿಸಿದ ತಕ್ಷಣ ಮಂಜೇಶ್ವರ ಪೊಲೀಸರು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.
ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಮೂಲಕ ಅನ್ಯರಾಜ್ಯ ಕಾರ್ಮಿಕರು ಭಾಗಿಯಾಗಿರುವುದಾಗಿ ಪೋಲಿಸರಿಗೆ ಮಾಹಿತಿ ಲಭ್ಯವಾಗಿದೆ. ಇವರೇ ಕೊಲೆಯ ಹಿಂದೆ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆಗೆ ಕಾರಣವೇನು ಹಾಗೂ ಆರೋಪಿಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
.jpeg)
0 Comments