Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಧಾರ್ಮಿಕ ಬರಹಗಾರ್ತಿ, ಸಂಗೀತ ಪ್ರವೀಣೆ ದೇಲಂಪಾಡಿ ಸುಗುಣಾ ತಂತ್ರಿ ನಿಧನ

ಕುಂಬಳೆ : ಕುಂಬಳೆ ಸೀಮಾ ತಂತ್ರಿವರ್ಯರಾಗಿದ್ದ ದಿ. ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಧರ್ಮಪತ್ನಿ ಸುಗುಣಾ ತಂತ್ರಿ (75) ನಿಧನರಾದರು. ವಯೋ ಸಹಜ ಅಸ್ವಸ್ಥತೆಯಿಂದ ಉಪ್ಪಿನಂಗಡಿ ಸಮೀಪದ  ರಾಮಕುಂಜದ ಇರ್ಕುಮಠ ಮನೆಯಲ್ಲಿ ನಿಧನರಾಗಿರುವುದಾಗಿ ತಿಳಿದು ಬಂದಿದೆ. ಪತಿಯ ವಿಯೋಗದ ಬಳಿಕ ಅವರು ರಾಮಕುಂಜದ ತವರು ಮನೆಯಲ್ಲಿ ಸಹೋದರರ ಆಶ್ರಯದಲ್ಲಿ ನೆಲೆಸಿದ್ದರು.

ಮೃತರು ಧಾರ್ಮಿಕ ಬರಹಗಳ ಲೇಖಕಿಯಾಗಿದ್ದು ಹಲವೆಡೆಗಳಲ್ಲಿ ಧಾರ್ಮಿಕ ಉಪನ್ಯಾಸ, ಪ್ರವಚನ‌ ನೀಡುತ್ತಿದ್ದರು. ಸಂಗೀತದಲ್ಲೂ ಪ್ರವೀಣೆಯಾಗಿದ್ದ ಇವರು ಹಾಡುಗಾರಿಕೆ ನಡೆಸುತ್ತಿದ್ದರು. ಹಲವೆಡೆಗಳಲ್ಲಿ ಸಂಗೀತ ಕಚೇರಿ ನೀಡಿದ್ದರು. ಅವರಿಗೆ ಮಕ್ಕಳಿಲ್ಲ ಪ್ರಸ್ತುತ ದೇಲಂಪಾಡಿ ತಂತ್ರಿಗಳಾಗಿರುವ ಬ್ರಹ್ಮಶ್ರೀ ಗಣೇಶ ತಂತ್ರಿಗಳವರು ದೇಲಂಪಾಡಿ ಬಾಲಕೃಷ್ಣ ತಂತ್ರಿ-ಸುಗುಣಾ ದಂಪತಿಯರ ಉತ್ತರಾಧಿಕಾರಿಯಾಗಿ ತಂತ್ರಿಸ್ಥಾನ ನಿರ್ವಹಿಸುತ್ತಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement