Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಏಳ್ಕಾನದಲ್ಲಿ ರಾತ್ರಿ ಜನವಾಸ ಇಲ್ಲದ ಮನೆಯಿಂದ ನಗ ನಗದು ಕಳವು


ಪೆರ್ಲ : ಏಳ್ಕಾನದ ಮನೆಯೊಂದರಲ್ಲಿ ರಾತ್ರಿ ವೇಳೆ ಜನ ವಾಸ ಇಲ್ಲದ ಸಂದರ್ಭದಲ್ಲಿ ಮನೆಯ ಬಾಗಿಲಿನ‌ ಲಾಕ್ ಮುರಿದು ಭಾರೀ ಪ್ರಮಾಣದ ನಗ ನಗದು ಕಳವುಗೈದ ಕೃತ್ಯ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಇಲ್ಲಿನ ಬಾಳೆಗುಳಿ ನಿವಾಸಿ ಪಾರ್ವತಿ ನಾಯ್ಕ್  ಎಂಬವರ ಮನೆಗೆ ಗುರುವಾರ ರಾತ್ರಿ ಕಳ್ಳರು ನುಗ್ಗಿದ್ದು  ಮನೆಯೊಳಗೆ ಗೋಡ್ರೆಜ್ ಮುರಿದು ಸುಮಾರು 70 ಸಾವಿರ ರೂ ಹಾಗೂ ಅವರ ಚಿನ್ನದ  ಕಿವಿಯೋಲೆ ಮತ್ತು ಚೈನ್ ಕಳವುಗೈದಿದ್ದಾರೆ. ಪಾರ್ವತಿ ಅವರ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುವ ಕಾರಣ ರಾತ್ರಿ ವೇಳೆ ಅವರ ತರವಾಡು ಮನೆಗೆ ಹೋಗಿ ತಂಗುತ್ತಿದ್ದರು. ಇದನ್ನು‌ ಅರಿತ ಯಾರೋ ಈ ಕೃತ್ಯ ಎಸಗಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಬದಿಯಡ್ಕ ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು ಫಾರೆನಿಕ್ಸ್ ಹಾಗೂ ಶ್ವಾನ‌ದಳ ಸ್ಥಳಕ್ಕಾಗಮಿಸಿ ತನಿಖೆ ನಡೆಸಿದೆ. ಕಳ್ಳರ ಚಲನವಲನದ ಕುರಿತು ನಿಖರ ಮಾಹಿತಿ ಪೋಲಿಸರಿಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

Post a Comment

0 Comments

ಜಾಹೀರಾತು

Responsive Advertisement