ಬದಿಯಡ್ಕ : 18 ವರ್ಷದ ಬಾಲಕಿ ನಾಪತ್ತೆಯಾಗಿರುವುದಾಗಿ ಬದಿಯಡ್ಕ ಪೋಲಿಸ್ ಠಾಣೆಯಲ್ಲಿ ದೂರಲಾಗಿದೆ. ಕುಂಬ್ಡಾಜೆ ಸಮೀಪದ ವಡಂಬಳದ ಹರ್ಷಿತಾ ನಾಪತ್ತೆಯಾದ ಯುವತಿ. ಈ ತಿಂಗಳ 5 ರಂದು ಬೆಳಿಗ್ಗೆ 11 ಗಂಟೆಗೆ ಮುಳ್ಳೇರಿಯದಲ್ಲಿರುವ ಫ್ಯಾನ್ಸಿ ಅಂಗಡಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ಆಕೆ ಹಿಂತಿರುಗದಿದ್ದಾಗ, ಆಕೆಯ ಸಹೋದರಿ ಆಶಾಲತಾ ತನ್ನ ಸಂಬಂಧಿಕರ ಮನೆಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಹುಡುಕಾಡಿದರೂ ಯಾವುದೇ ಮಾಹಿತಿ ಸಿಗದ ಕಾರಣ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಸಮಯದಲ್ಲಿ ಸುಳ್ಯ ಬಳಿಯ ಜಾಲ್ಸೂರಿನ ಆಕೆಯ ಗೆಳೆಯನೂ ನಾಪತ್ತೆಯಾಗಿದ್ದು ಆತನ ಜೊತೆ ಹೋಗಿರಬೇಕೆಂದು ಶಂಕಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

0 Comments