ಕುಂಬ್ಡಾಜೆ: ಉಬ್ರಂಗಳದಲ್ಲಿ ಒಂದೇ ದಿನ ಇಬ್ಬರು ಸಹೋದರರು ಮೃತಪಟ್ಟ ಘಟನೆ ಪರಿಸರದಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.ಉಬ್ರಂಗಳ ನಿವಾಸಿಗಳಾದ ಸಹೋದರರಾದ ರಾಮಕೃಷ್ಣ ಭಟ್ (70) ಹಾಗೂ ಕೇಶವ ಭಟ್ (65) ಅವರು ಕೆಲವೇ ಗಂಟೆಗಳ ಅಂತರದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ರಾಮಕೃಷ್ಣ ಭಟ್ ಅವರು ಜಾನುವಾರುಗಳಿಗೆ ನೀರು ನೀಡಲು ಹಟ್ಟಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಅವರ ಸಹೋದರ ಕೇಶವ ಭಟ್ ಮನೆಯಲ್ಲಿ ಪೂಜೆಯಲ್ಲಿ ತೊಡಗಿದ್ದರು. ಪೂಜೆ ಮುಗಿಸಿ ಹೊರಬಂದ ಕೇಶವ ಭಟ್ ಅವರು ಹಟ್ಟಿಯ ಸಮೀಪ ರಾಮಕೃಷ್ಣ ಭಟ್ ಕುಸಿದು ಬಿದ್ದಿರುವುದನ್ನು ಗಮನಿಸಿದರು.
ತಕ್ಷಣ ಸ್ಥಳೀಯರ ನೆರವಿನಿಂದ ರಾಮಕೃಷ್ಣ ಭಟ್ ಅವರನ್ನು ಮುಳ್ಳೇರಿಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರೀಕ್ಷಿಸಿದ ಬಳಿಕ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ, ರಾತ್ರಿ ಸುಮಾರು 10.30ರ ವೇಳೆಗೆ ಕೇಶವ ಭಟ್ ಅವರು ಮನೆಯಲ್ಲೇ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.ಸಹೋದರರಿಬ್ಬರ ನಿಧನದ ಸುದ್ದಿ ಕುಟುಂಬಕ್ಕೆ ಹಾಗೂ ಉಬ್ರಂಗಳ ಪರಿಸರದಲ್ಲಿ ಆಘಾತ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದೆ.

0 Comments