ಉಪ್ಪಳ : ಮಣಿಮುಂಡದಲ್ಲಿರುವ ಕ್ವಾರ್ಟರ್ಸ್‌ನಿಂದ ಹೊರಗೆ ತೆರಳಿದ ಯುವತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಉತ್ತರಪ್ರದೇಶದ ಖೇರಿ ಜಿಲ್ಲೆಯ ಶ್ರೀನಗರ ನಿವಾಸಿ, ಪ್ರಸ್ತುತ ಉಪ್ಪಳ ಮಣಿಮುಂಡದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಮನ್‌ಜಿತ್ ಸಿಂಗ್ ಅವರ ಪತ್ನಿ ಅಚಲ್ ಸಿಂಗ್ (25) ನಾಪತ್ತೆಯಾದ ಯುವತಿ. ಸೆಪ್ಟೆಂಬರ್ 8ರಂದು ಸಂಜೆ 4.30ರ ಸುಮಾರಿಗೆ ಅಚಲ್ ಸಿಂಗ್ ಅವರು ಮಣಿಮುಂಡದಲ್ಲಿರುವ ಕ್ವಾರ್ಟರ್ಸ್‌ನಿಂದ ಹೊರಗೆ ತೆರಳಿದ್ದು, ಬಳಿಕ ವಾಪಸ್ ಬಂದಿಲ್ಲ ಎಂದು ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಮಂಜೇಶ್ವರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
0 Comments