ಮುಳ್ಳೇರಿಯ : ನಿರಂತರವಾಗಿ ಕಾಡುತ್ತಿದ್ದ ಗಂಟಲು ನೋವಿನಿಂದ ಮನನೊಂದು ಗೃಹಿಣಿಯೊಬ್ಬರು ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಳ್ಳೇರಿಯ ಸಮೀಪದ ಕಾರ್ಲೆ ಎಂಬಲ್ಲಿ ನಡೆದಿದೆ.
ಕಾರ್ಲೆಯ ವಿಜಯ ಅವರ ಪತ್ನಿ ಸುಲೋಚನಾ (46) ಮೃತಪಟ್ಟವರು. ಗುರುವಾರ ರಾತ್ರಿ ಊಟ ಮಾಡಿ ಮಲಗಿದ್ದ ಅವರು, ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆದೂರು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸುಲೋಚನಾ ಅವರು ಅಡೂರು ಚೀನಾಡಿಯ ಅಂಬಾಡಿ–ಲಕ್ಷ್ಮಿ ದಂಪತಿಯ ಪುತ್ರಿಯಾಗಿದ್ದು, ಮಕ್ಕಳಾದ ಋತೇಶ್, ಋತಿಕಾ, ಮನ್ವಿತ್, ಒಡಹುಟ್ಟಿದವರಾದ ಪುಷ್ಪಾ, ಪ್ರಕಾಶ್ ಹಾಗೂ ಪದ್ಮನಾಭ ಎಂಬಿವರನ್ನು ಅಗಲಿದ್ದಾರೆ.

0 Comments