Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

10ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು : 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಕ ಪೊಲೀಸ್ ಠಾಣಾ ವ್ಯಾಪ್ತಿಯ ಪಳ್ಳಿಕ್ಕೆರೆ ಕೀಕ್ಕಾನೆಯಲ್ಲಿ ನಡೆದಿದೆ. ಕೀಕ್ಕಾನೆ ನಿವಾಸಿ ಧ್ಯಾನ್‌ರಾಜ್ (15) ಮೃತಪಟ್ಟ ವಿದ್ಯಾರ್ಥಿ. ಕಾಸರಗೋಡಿನ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಧ್ಯಾನ್‌ರಾಜ್ ಶುಕ್ರವಾರ ಸಂಜೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಆತನನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ಉದ್ಯೋಗಿ ರಾಜೇಶ್ ಕುಮಾರ್ ಹಾಗೂ ಮಾನ್ಯ ಕಲ್ಲಕಟ್ಟದ ಶಿಕ್ಷಕಿ ನಿರೀಕ್ಷಾ ದಂಪತಿಯ ಪುತ್ರನಾದ ಧ್ಯಾನ್‌ರಾಜ್ ನಿಗೆ ತನ್ವಿ ಎಂಬ ಸಹೋದರಿ ಇದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಬೇಕ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



ಒಂದು ಕ್ಷಣದ ಸಂಕಷ್ಟಕ್ಕೆ ಆತ್ಮಹತ್ಯೆ ಪರಿಹಾರವಲ್ಲ.


ಜೀವನದಲ್ಲಿ ಎಂತಹ ಕಷ್ಟ ಎದುರಾದರೂ ಅದನ್ನು ಒಬ್ಬರೇ ಎದುರಿಸಬೇಕಿಲ್ಲ. ನಿಮ್ಮ ಸಮಸ್ಯೆಯನ್ನು ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಹಂಚಿಕೊಳ್ಳಿ. ಸಹಾಯ ಕೇಳುವುದು ದುರ್ಬಲತೆಯಲ್ಲ; ಅದು ಧೈರ್ಯ. ನಿಮ್ಮ ಜೀವನ ಅಮೂಲ್ಯ — ಸಮಸ್ಯೆಗಳಿಗೆ ಪರಿಹಾರವಿದೆ.


ಸಹಾಯವಾಣಿ:

📞 ಕೇರಳ – DISHA: 1056 (24x7, ಉಚಿತ)

📞 ರಾಷ್ಟ್ರೀಯ Tele-MANAS: 14416 (ಮಾನಸಿಕ ಆರೋಗ್ಯ ಸಹಾಯ)


ತಕ್ಷಣದ ಅಪಾಯವಿದ್ದರೆ ಸಮೀಪದ ಆಸ್ಪತ್ರೆಗೆ ತೆರಳಿ ಅಥವಾ 112ಕ್ಕೆ ಕರೆ ಮಾಡಿ.



Post a Comment

0 Comments

ಜಾಹೀರಾತು

Responsive Advertisement