Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಧರ್ಮತ್ತಡ್ಕದಲ್ಲಿ ಗಮಕ ಶ್ರಾವಣ ಕಾರ್ಯಕ್ರಮ

ಧರ್ಮತ್ತಡ್ಕ : ಕರ್ನಾಟಕ ಗಮಕಕಲಾ ಪರಿಷತ್ತು ಬೆಂಗಳೂರು ಮತ್ತು ಕೇರಳ ಗಡಿನಾಡ ಘಟಕ ಕಾಸರಗೋಡಿನ ಆಶ್ರಯದಲ್ಲಿ ಶ್ರೀ. ದುರ್ಗಾಪರಮೇಶ್ವರಿ ಐಡೆಡ್ ಹೈಯರ್ ಸೆಕೆಂಡರಿ ಶಾಲೆ, ಧರ್ಮತ್ತಡ್ಕದಲ್ಲಿ ಗಮಕ ಶ್ರಾವಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾಗಿರುವ  ವಿ ಬಿ ಕುಳಮರ್ವ, ಕುಂಬಳೆ  ವಹಿಸಿದರು. ಸಂಸ್ಥೆಯ ಪ್ರಬಂಧಕರಾದ   ಶಂಕರನಾರಾಯಣ ಭಟ್ ಎನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲರಾದ  ಸತೀಶ್ ಶೆಟ್ಟಿ ಶುಭ ಹಾರೈಸಿದರು. ಪ್ಲಸ್ ಟು ತರಗತಿಯ ಶೃತಿಕಲ ಮತ್ತು ಜಯಶ್ರೀ ತೊರವೆ ರಾಮಾಯಣದ ಆಯ್ದ ಭಾಗದ ವಾಚನ ಮತ್ತು ವ್ಯಾಖ್ಯಾನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕಿಯರಾದ   ಶ್ವೇತಾ,  ನಿವೇದಿತಾ ಮತ್ತು  ದೀಪ್ತಿ ಉಪಸ್ಥಿತರಿದ್ದರು.

 ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ಗೌತಮಿ, ಶ್ರುತಿಕಲ ಮತ್ತು ಪ್ರೀಕ್ಷಾ ಪ್ರಾರ್ಥನೆಯನ್ನು ಹಾಡಿದರು. ವಿದ್ಯಾರ್ಥಿನಿಯರಾದ ಕದೀಜತ್ ಸಫ ಸ್ವಾಗತಿಸಿ, ಯಶ್ವಿತ ವಂದಿಸಿದರು. ಚಿಂತನ್ ಕೆ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments

ಜಾಹೀರಾತು

Responsive Advertisement