ಕಾಸರಗೋಡು : ಸಣ್ಣ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ತಿರುಪತಿ ಮಾದರಿಯಲ್ಲಿಯೇ ನವರಾತ್ರಿ ಉತ್ಸವ ಜರಗುವ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಕ್ಟೋಬರ್ 11 ರಿಂದ 21 ರ ತನಕ ಜರಗಲಿರುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರ ತಂತ್ರಿವರ್ಯರೂ, ಮೊಕ್ತೇಸರರು ಆದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ದಿವ್ಯಹಸ್ತದಿಂದ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿಯ ಪ್ರಮುಖರಾದ ರಾಮ ಕಿಶೋರ ಅಸ್ರ, ಮಯೂರ ಅಸ್ರ, ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ ನಗರಸಭಾ ಸದಸ್ಯ ಕೆ. ಎನ್. ರಾಮಕೃಷ್ಣ ಹೊಳ್ಳ, ಕೆ.ವಿ. ಶ್ರೀನಿವಾಸ ಹೊಳ್ಳ, ಕಿಶೋರ್ ಕುಮಾರ್ ಎಸ್.ವಿ.ಟಿ, ಕೆ.ವಿ ಶೇಷಾದ್ರಿ ಹೊಳ್ಳ, ಪುರಂದರ ಶೆಟ್ಟಿ, ರವಿ ಕೇಸರಿ, ಲಕ್ಷ್ಮೀಕಾಂತ ನೆಲ್ಲಿಕುಂಜೆ ಉಪಸ್ಥಿತರಿದ್ದರು.

0 Comments