ಕಾಸರಗೋಡು : ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ನಡೆಯುತ್ತಿರುವ ಶಾಲಾ ಮಧ್ಯಾಹ್ನದ ಊಟ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ಕಾಸರಗೋಡು ಶಿಕ್ಷಣ ಉಪಜಿಲ್ಲಾ ಮಟ್ಟದ ಸಾರ್ವಜನಿಕ ವಿಚಾರಣೆ ನಡೆಯಿತು.
ಕಾರ್ಯಕ್ರಮವನ್ನು ಕಾಸರಗೋಡು ಶಾಸಕ ಕಲ್ಲಟ್ಟ ಮಹಿನ್ ಹಾಜಿ ಉದ್ಘಾಟಿಸಿದರು. ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ. ಬಾಲನ್ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಸಾಮಾಜಿಕ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಚರ್ಚೆಯಲ್ಲಿ ಕುಟ್ಟಿಕೋಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಶೋಭನಕುಮಾರಿ, ಮುಳಿಯಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಿ.ಕೆ. ಪುಷ್ಪಕುಮಾರಿ, ನಗರಸಭಾ ಸದಸ್ಯ ಸಲೀಂ ನೆಚ್ಚಿಪ್ಪಡಪ್ಪ್, ಕಾರಡ್ಕ ಬ್ಲಾಕ್ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಗಂಧಿನಿ ಸೇರಿದಂತೆ ಹಲವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎ.ಇ.ಒ. ಶಶಿಧರ ಎಂ., ಉಷಾ ಇ.ಪಿ., ಕಿಲಾ ಜಿಲ್ಲಾ ಸಂಯೋಜಕ ವಿ.ಕೆ. ರಾಮಚಂದ್ರನ್, ಎ.ವಿ. ಶ್ರೀಜಿತ್, ಕೃಷಿ ಅಧಿಕಾರಿ ಗಣೇಶನ್, ಕೆ.ಪಿ. ಶಶಿಧರನ್ ಹಾಗೂ ವಿ. ದಾಮೋದರನ್ ಉಪಸ್ಥಿತರಿದ್ದರು.


0 Comments