Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ತಿರುವೋಣಂ ಬಂಪರ್‌ ಲಾಟರಿ ಎರಡನೇ ಬಹುಮಾನ ಬಂಟ್ವಾಳಕ್ಕೆ : ರೋಹಿತ್‌ಗೆ 1 ಕೋಟಿ ರೂಗಳ ಅದೃಷ್ಟ

ಕಾಸರಗೋಡು : ತಿರುವೋಣಂ ಬಂಪರ್ ಲಾಟರಿಯ ಎರಡನೇ ಬಹುಮಾನವಾದ ರೂ.1 ಕೋಟಿ ದ.ಕ.ಜಿಲ್ಲೆಯ ಪಾಲಾಗಿದೆ. ಮಂಗಳೂರು ಸಮೀಪದ ಬಂಟ್ವಾಳದ ಪಣೊಲಿಬೈಲ್ ನಿವಾಸಿ  ರೋಹಿತ್ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಲಭಿಸಿದೆ.

ಅದೃಷ್ಟ ಒಲಿದ ಟಿಕೆಟ್‌ನೊಂದಿಗೆ ರೋಹಿತ್ ಅವರು ಸಬ್ ಏಜೆಂಟ್ ಮಂಜುನಾಥ್ ಅವರೊಂದಿಗೆ ಕಾಸರಗೋಡಿನ ನ್ಯೂ ಲಕ್ಕಿ ಸೆಂಟರ್ ಏಜೆನ್ಸಿಗೆ ಭೇಟಿ ನೀಡಿ, ತಮ್ಮ ಟಿಕೆಟ್‌ಗೆ ಅದೃಷ್ಟ ತಂದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಒಂದೇ ಟಿಕೆಟ್ ಮೂಲಕ ಕೋಟಿ ರೂಪಾಯಿ ಬಹುಮಾನ ಕರ್ನಾಟಕದ ಪಾಲಾಗಿರುವುದು ಲಾಟರಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ರೋಹಿತ್ ಅವರಿಗೆ ಬಹುಮಾನ ಲಭಿಸಿದ ಸುದ್ದಿ ತಿಳಿಯುತ್ತಿದ್ದಂತೆ ನ್ಯೂ ಲಕ್ಕಿ ಸೆಂಟರ್‌ನಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.

Post a Comment

0 Comments

ಜಾಹೀರಾತು

Responsive Advertisement