Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಇಂದು ಡ್ರಾಗೊಂಡ ಕೇರಳ ಲಾಟರಿಯಲ್ಲಿ ತೃತೀಯ ಬಹುಮಾನ ಸ್ವರ್ಗದಿಂದ ಮಾರಾಟವಾದ DE 399932 ನಂಬ್ರಕ್ಕೆ: ಅದೃಷ್ಟಶಾಲಿ ಯಾರು? ಹುಡುಕಾಟದಲ್ಲಿ ಏಜೆಂಟ್

ಪೆರ್ಲ : ಕೇರಳ ಸರ್ಕಾರದ ಲಾಟರಿ ಇಲಾಖೆಯ  ಇಂದು ಡ್ರಾಗೊಂಡ (ಸೆ. 30) ಧನಲಕ್ಷ್ಮಿ DL71 ಲಾಟರಿ ಫಲಿತಾಂಶದಲ್ಲಿ ತೃತೀಯ ಬಹುಮಾನ 5 ಲಕ್ಷ ರೂ.  ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಸ್ವರ್ಗದ ಬೊಲ್ಪು ಲಕ್ಕಿ ಲಾಟರಿ ಏಜೆಂಟ್  ಮಾರಿದ DE 399932 ಸಂಖ್ಯೆಯ ಟಿಕೆಟ್‌ಗೆ  ದೊರೆತಿದೆ.

ಆದರೆ ಬಹುಮಾನ ವಿಜೇತ ಅದೃಷ್ಠಶಾಲಿ ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಕೇರಳ ಕರ್ನಾಟಕದ ಗಡಿ ಪ್ರದೇಶವಾದ ಪಾಣಾಜೆ ಸ್ವರ್ಗದ ಮುಖ್ಯ ರಸ್ತೆಯಲ್ಲಿ ಕಾರ್ಯಾಚರಿಸುವ ಈ ಲಾಟರಿ ಅಂಗಡಿಯಿಂದ ಲಾಟರಿ ಖರೀದಿಸಲು ಅನ್ಯ ರಾಜ್ಯದ ಜನರು ಬರುತ್ತಿರುವುದರಿಂದ ಅದೃಷ್ಠ ಯಾರಿಗೆ ಒಲಿದಿದೆ ಎಂಬ ಹುಡುಕಾಟ ನಡೆಸಲಾಗುತ್ತಿದೆ ಎಂದು ಲಾಟರಿ ಏಜೆಂಟ್ ಪ್ರಭಾಕರ ರೈ ವಿಶೇಷ ಚಾನೆಲ್ ಗೆ ತಿಳಿಸಿದ್ದಾರೆ. 

ಇದೇ ಟಿಕೆಟ್ ಮಾರಾಟ ಕೇಂದ್ರದಿಂದ ಈ ಹಿಂದೆ 80 ಲಕ್ಷ ರೂ ಮೊತ್ತದ ಓಣಂ ಬಂಪರ್ ಸೇರಿದಂತೆ 50 ಲಕ್ಷದ ಮತ್ತೊಂದು ಬಹುಮಾನವೂ ಲಭಿಸಿತ್ತು ಎನ್ನಲಾಗಿದೆ. ಇದೀಗ ಮೂರನೇ ಬಾರಿಗೆ ದೊಡ್ಡ ಬಹುಮಾನ ಬಂದಿದ್ದು, ಲಕ್ಕಿ ಲಾಟರಿ ಕೇಂದ್ರ ಗಮನ ಸೆಳೆದಿದೆ.

Post a Comment

0 Comments

ಜಾಹೀರಾತು

Responsive Advertisement