Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರ ದಾರುಣಾಂತ್ಯ

 


ದೆಹಲಿ: ದೆಹಲಿಯ ನಜಾಫ್‌ಗಢದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳಿಗೂ ಸುಟ್ಟ ಗಾಯಗಳಾಗಿವೆ.

ರಾಮ್‌ಜಿ ಲಾಲ್ ಅವರ ಪತ್ನಿ ಕಮಲೇಶ್ (50), ಪುತ್ರಿ ಮೋನಿಕಾ (29), ಪುತ್ರ ಕೇಶವ್ (25) ಹಾಗೂ ಸೊಸೆ ಸೋನಂ (24) ಮೃತಪಟ್ಟವರು.

ಸ್ಫೋಟದಲ್ಲಿ ಮೋನಿಕಾ ಅವರ ಪುತ್ರಿ ದಿಯಾ (4) ಮತ್ತು ಕೇಶವ್ ಅವರ ಪುತ್ರಿ ಯುವಾಂಶ್ ಅವರಿಗೂ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಮೃತಪಟ್ಟಿದ್ದಾರೆ.

ಮೋನಿಕಾ ಅವರು ಪೋಷಕರನ್ನು ಭೇಟಿಯಾಗಲು ಬಂದಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಮೋನಿಕಾ ಅವರ ಪತಿ ರಾಹುಲ್ ಹಾಗೂ ಕುಟುಂಬದ ಇತರ ಸದಸ್ಯರು ಗುರುಗ್ರಾಮದ ಬಾದ್‌ಶಾಪುರದಲ್ಲಿ ವಾಸವಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಫೋಟಕ್ಕೆ ನಿಖರವಾದ ಕಾರಣವೇನು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement