ಪೆರ್ಲ : ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್, ಎಣ್ಮಕಜೆ ಗ್ರಂಥಾಲಯ ನೇತೃತ್ವ ಸಮಿತಿ ಹಾಗೂ ನೇತಾಜಿ ಸಾರ್ವಜನಿಕ ಗ್ರಂಥಾಲಯ ಸಹಯೋಗದೊಂದಿಗೆ ಪೆರ್ಲದಲ್ಲಿ ಎಣ್ಮಕಜೆ ಬಾಲವೇದಿಕೆ ಸೃಜನೋತ್ಸವವನ್ನು ನಿವೃತ್ತ ಮುಖ್ಯೋಪಾಧ್ಯಾಯರು ನಿಕಟಪೂರ್ವ ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿರುವ ಶಂಕರ ರೈ ಮಾಸ್ತರ್ ಉದ್ಘಾಟಿಸಿದರು. 'ಮಕ್ಕಳು ನಾಳೆಯ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಗಟ್ಟಿ ಬೇರುಗಳಾಗಬೇಕು. ಪ್ರತೀ ಗ್ರಂಥಾಲಯಗಳು ಬಾಲವೇದಿಕೆಯ ಬಾಲರನ್ನು ಪೋಷಿಸುವ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ. ಮಕ್ಕಳು ಸೃಜನಾತ್ಮಕವಾಗಿ ಬೆಳೆಯಬೇಕಾದರೆ ಗ್ರಂಥಾಲಯಗಳ ಸಾಮೀಪ್ಯವೊಂದೇ ಸಾಕು. ಸೃಜನೋತ್ಸವದಲ್ಲಿ ತಮ್ಮ ಪ್ರತಿಭೆಗಳನ್ನು ಸ್ವತಂತ್ರವಾಗಿ ಪ್ರದರ್ಶಿಸುವ ಇದು ಮಕ್ಕಳ ಹಬ್ಬವಾಗಿದೆ ' ಎಂದು ಅವರು ನುಡಿದರು.
ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಸಲಾಹುದ್ದೀನ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯರುಗಳಾದ ಉದಯ ಸಾರಂಗ್, ರಾಮಚಂದ್ರ ಮೊಳಕ್ಕಾಲು, ರಂಜಿತ್ ಮಾಸ್ತರ್, ನಿಶ್ಮಿತಾ ಟೀಚರ್, ಶ್ರೀವಿದ್ಯಾ ಟೀಚರ್, ವಿನೋದ್ ಅಮೇಕ್ಕಳ, ವಿಶ್ವರಾಜ್, ಪಿಟಿಎ ಅಧ್ಯಕ್ಷ ಪ್ರಕಾಶ ರೈ , ಪಂಚಾಯತ್ ಸದಸ್ಯೆ ಸೌಧಾಭಿ ಹನೀಫ್ ಬ, ಯುವಧಾರಾ ಲೈಬ್ರರಿ ಕಾರ್ಯದರ್ಶಿ ವೈ ನಾರಾಯಣ, ವಿಖ್ಯಾತ್ ರೈ ಬಾಡೂರು ಉಪಸ್ಥಿತರಿದ್ದರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯರಾದ ಬಶೀರ್ ಕೊಟ್ಟುಡೇಲ್ ಬಹುಮಾನ ವಿತರಿಸಿದರು. ನೂರರಷ್ಟು ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಎಣ್ಮಕಜೆ ಗ್ರಂಥಾಲಯ ನೇತೃತ್ವ ಸಮೀತಿ ಕನ್ವೀನರ್ ರಾಮಕೃಷ್ಣ ರೈ ಸ್ವಾಗತಿಸಿ, ಗ್ರಂಥಪಾಲಕಿ ಉಷಾ ವಂದಿಸಿದರು.
.jpeg)

0 Comments