Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೇರಳ ಸ್ಕೂಲ್ ಟೀಚರ್ಸ್ ಯೂನಿಯನ್ ಜಿಲ್ಲಾ ಸಮಿತಿಯಿಂದ ಸಿ. ಎಚ್. ಮುಹಮ್ಮದ್ ಕೋಯಾ ಸಂಸ್ಮರಣೆ ಹಾಗೂ ಪ್ರತಿಭಾ ಕ್ವಿಜ್‌ ಕಾರ್ಯಕ್ರಮ

ಕಾಸರಗೋಡು : ಕೇರಳ ಸ್ಕೂಲ್ ಟೀಚರ್ಸ್ ಯೂನಿಯನ್ (ಕೆಎಸ್‌ಟಿಯು) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಸಿ. ಎಚ್. ಮುಹಮ್ಮದ್ ಕೋಯಾ ಸಂಸ್ಮರಣಾ ಕಾರ್ಯಕ್ರಮದ ಭಾಗವಾಗಿ ಜಿಲ್ಲಾ ಮಟ್ಟದ ಸಿ. ಎಚ್ ಪ್ರತಿಭಾ ಕ್ವಿಜ್ ಸ್ಪರ್ಧೆ ಜಿ ಎಚ್ ಎಸ್ ಎಸ್ ಕಾಸರಗೋಡು ಶಾಲೆಯಲ್ಲಿ ಸಂಪನ್ನಗೊಂಡಿತು.

ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಓದುವ ಆಸಕ್ತಿ, ಚಿಂತನಾ ಸಾಮರ್ಥ್ಯ ಹಾಗೂ ಸ್ಪರ್ಧಾ ಮನೋಭಾವ ಬೆಳೆಸುವ ಉದ್ದೇಶದಿಂದ ಪ್ರತಿಭಾ ಕ್ವಿಜ್ ಆಯೋಜಿಸಲಾಗಿತ್ತು. ಕಾಸರಗೋಡು ನಗರ ಸಭೆಯ ವನಿತಾ ಸಭಾಂಗಣದಲ್ಲಿ ನಡೆದ ಸಿ. ಎಚ್. ಸಂಸ್ಮರಣೆ ಕಾರ್ಯಕ್ರಮವನ್ನು  ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಕಲ್ಲಟ್ರ ಮಾಯಿನ್ ಉದ್ಘಾಟಿಸಿದರು.

ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಿ. ಎಚ್. ಮುಹಮ್ಮದ್ ಕೋಯಾ ನೀಡಿದ ಮಹತ್ವದ ಕೊಡುಗೆಗಳನ್ನು ಸದಾ ಸ್ಮರಣೀಯ.. ಶಿಕ್ಷಣದ ಮೂಲಕ ಸಮಾಜದ ಪ್ರಗತಿ ಸಾಧಿಸಬೇಕೆಂಬ ಅವರ ದೃಷ್ಟಿಕೋನ ಹಾಗೂ ಹಿಂದುಳಿದ ವರ್ಗಗಳ ಶೈಕ್ಷಣಿಕ ಉನ್ನತಿಗಾಗಿ ಅವರು ನಡೆಸಿದ ಪ್ರಯತ್ನಗಳು ಇಂದಿನ ತಲೆಮಾರಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.

ಮುಸ್ಲಿಂ ಲೀಗ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಹಾಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕ್ರಮದ ಸಮಾರೋಪ ಹಾಗೂ ಟ್ರೋಫಿ, ನಗದು ಬಹುಮಾನ ವಿತರಣಾ ಸಮಾರಂಭವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯ ಉಪಾಧ್ಯಕ್ಷ ಎ. ಅಬ್ದುರಹ್ಮಾನ್ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಎನ್.ಎ. ನೆಲ್ಲಿಕುನ್ನು ಬಹುಮಾನ ವಿತರಿಸಿದರು. ಹಕೀಂ ಮಾಸ್ಟರ್ ಮಾಡಕ್ಕಾಲ್ ಮುಖ್ಯ ಭಾಷಣಗೈದರು.

ಕಾರ್ಯಕ್ರಮದಲ್ಲಿ ಕಾಸರಗೋಡು ಎಸ್ ಎಸ್ ಕೆ ಜಿಲ್ಲಾ ಡಿ.ಪಿ.ಸಿ. ಶೌಕತ್ ಅಲಿ ಅಕ್ಕಾಳತ್, ಬಿ.ಪಿ.ಸಿ. ಸುಬೈರ್ ಪರಪ್ಪ, ಜಿಲ್ಲಾ ಕೆಎಸ್‌ಟಿಯು ಅಧ್ಯಕ್ಷ ಯಾಸರ್ ಅರಫಾತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂನುಸ್, ರಾಜ್ಯ ಉಪಾಧ್ಯಕ್ಷ ಗಫೂರ್ ದೇಲಿ, ಖಲೀಲ್, ರಫೀಕ್ ಕಳ್ಳಾರ್, ಅಶ್ರಫ್ ಮರ್ತ್ಯ, ನಿಸಾಮುದ್ದೀನ್, ಕಮಾಲ್, ಖೈರುನ್ನಿಸಾ, ಆಶಿಫ್ ನಾಯನ್ಮಾರ್ಮೂಲ, ಮುರ್ಷಿದ್, ಆರಿಫಾ ಟಿ.ಕೆ.ಸಿ., ಅನ್ಸಾರ್ ಕಡವಿಲ್, ಶುಹೈಬ್ ವಿ.ಪಿ., ದಾವೂದ್, ಶಿಹಾಬ್ ಪೈವಳಿಕೆ, ಸುಬೈರ್ ಕಿಣರಳ್ಳತಿಲ್ ಹಾಗೂ ಶುಹೈಬ್ ಮಂಜೇಶ್ವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement